ವೆರಿಗುಡ್ ಚಿತ್ರದಲ್ಲಿ ಜೂಹಿ ಚಾವ್ಲಾ ಗಾಯನ

Juhi Chawla will act and sing in her new  kannada movie
Highlights

ಯಶವಂತ ಸರ್‌ದೇಶಪಾಂಡೆ ನಿರ್ದೇಶನದ 'ವೆರಿಗುಡ್' ಚಿತ್ರದ ಮೂಲಕ ಜೂಹಿ ಚಾವ್ಲಾ ಮತ್ತೆ ಕನ್ನಡ ಚಿತ್ರರಂಗಕ್ಕೆ ಬಂದಿದ್ದಷ್ಟೇ ಅಲ್ಲ, ಈ ಚಿತ್ರದಲ್ಲಿ 'ಕಲಿಸು ಗುರುವೇ ಕಲಿಸು' ಎಂಬ ಹಾಡನ್ನೂ ಹಾಡಿದ್ದಾರೆ. 

ಅಭಿನಯದಲ್ಲಿ ಅವರಿಗಿದು ಮೂರನೇ  ಚಿತ್ರವಾದರೂ ಗಾಯಕಿಯಾಗಿ ಇದೇ ಮೊದಲ ಚಿತ್ರ. ಈ ಹಾಡು ಅಮೆರಿಕದ ಮಾಜಿ ಅಧ್ಯಕ್ಷ ಅಬ್ರಹಾಂ ಲಿಂಕನ್ ಅವರ ಪ್ರಸಿದ್ಧ ಪತ್ರದ ಭಾವಾನುವಾದ. ಎಸ್. ರಾಮನಾಥ ರಚನೆಯ ಈ ಹಾಡಿಗೆ ವಿ. ಮನೋಹರ್ ಸಂಗೀತ ನೀಡಿದ್ದಾರೆ. 

ಮೊದಲು ಈ ಹಾಡನ್ನು ಹಾಡಿದ್ದು ರಾಜು ಅನಂತಸ್ವಾಮಿ. ಅದೇ ಹಾಡನ್ನು ಜೂಹಿ ಚಾವ್ಲಾ ಧ್ವನಿಯಲ್ಲಿ ವೆರಿಗುಡ್ ಚಿತ್ರಕ್ಕೆ ಬಳಸಿಕೊಳ್ಳಲಾಗಿದೆ. ಈ ಚಿತ್ರದಲ್ಲಿ ಜೂಹಿ ಕನ್ನಡ ಶಾಲಾ ಶಿಕ್ಷಕಿಯಾಗಿ ಅಭಿನಯಿಸಿದ್ದಾರೆ

loader