'ಜೊತೆ ಜೊತೆಯಲಿ' ಧಾರಾವಾಹಿ ಮೂಲಕ ಕಿರುತೆರೆಗೆ ಬಂದಿರುವ ವಿಷ್ಣುವರ್ಧನ್ ಅಳಿಯ ಅನಿರುದ್ಧ್ ಕಿರುತೆರೆ ಸೀರಿಯಲ್ ಲೋಕದಲ್ಲಿ ಹೊಸ ಸಂಚಲನವನ್ನೇ ಸೃಷ್ಟಿಸಿದ್ದಾರೆ. 

‘ಜೊತೆ ಜೊತೆಯಲಿ’ ಅನಿರುದ್ಧ್ ಒಂದು ದಿನದ ಸಂಭಾವನೆ ಇಷ್ಟೊಂದಾ?

'ಜೊತೆ ಜೊತೆಯಲಿ' ಧಾರಾವಾಹಿ ಶುರುವಾಗಿ ಒಂದು ವಾರದಲ್ಲೇ ಟಿಆರ್ ಪಿಯಲ್ಲಿ ಮೊದಲ ಸ್ಥಾನ ಗಳಿಸಿತ್ತು. ಅನಿರುದ್ಧ್ ಆರ್ಯವರ್ಧನ್ ಪಾತ್ರ ಬಹಳ ಗಮನ ಸೆಳೆಯುತ್ತಿದೆ. ಆರ್ಯವರ್ಧನ್ ಪ್ರೇಕ್ಷಕರಿಗೆ ಮತ್ತಷ್ಟು ಹತ್ತಿರವಾಗುತ್ತಿದ್ದಾರೆ. ಪರಿಸರ ಕಾಳಜಿ ಬಗ್ಗೆ ಆರ್ಯವರ್ಧನ್ ಅಭಿಮಾನಿಗಳಿಗೆ ಸವಾಲೊಂದನ್ನು ಹಾಕಿದ್ದಾರೆ. 

 

‘ ನಿಮ್ಮ ಕೈಲಾದಷ್ಟು(ಕನಿಷ್ಠ 2) ಗಿಡಗಳನ್ನು ನೆಡಬೇಕು. ಗಿಡ ನೆಡಲು ಸ್ಥಳಾವಕಾಶ ಇಲ್ಲದವರು ಪಾಟ್ ನಲ್ಲಿ ನೆಡಬಹುದು. ಫೋಟೋಗಳನ್ನು ಇದೇ ಪೋಸ್ಟ್ ನ ಕೆಳಗೆ #AnirudhChallenge2 ಎಂದು ಬರೆದು ಕಮೆಂಟ್ ಮಾಡಿ.. ನನ್ನ ಕೈಲಾದಷ್ಟು ಫೊಟೋಗಳನ್ನು ನಾಳೆ ಸಂಜೆ ಹೆಸರಿನ ಸಮೇತ ಪೋಸ್ಟ್ ಮಾಡುವೆ. ಮುಖ್ಯವಾದ ವಿಚಾರ ಗಿಡ ನೆಡುವುದಷ್ಟೇ ಅಲ್ಲ.. ಅದನ್ನು ಚೆನ್ನಾಗಿ ಪೋಷಿಸಬೇಕು.. ಒಂದು ತಿಂಗಳ ನಂತರ ಒಬ್ಬ ಅದೃಷ್ಟಶಾಲಿಯ ಮನೆಗೆ ನನ್ನ ವಿಶೇಷ ಉಡುಗೊರೆ ತಲುಪಲಿದೆ ಎಂಬ’ ಚಾಲೆಂಜೊಂದನ್ನು ಹಾಕಿದ್ದರು. ಅಕ್ಟೋಬರ್ 2 ಕ್ಕೆ ಈ ಚಾಲೆಂಜನ್ನು ಹಾಕಿದ್ದರು. 

'ಜೊತೆ ಜೊತೆಯಲಿ’ ಆರ್ಯವರ್ಧನ್ ಗೆ ಜೋಡಿಯಾದ ಅನು; ಯಾರಿವರು?

 

ಅನಿರುದ್ಧ್ ಹಾಕಿದ ಈ ಚಾಲೆಂಜಿಗೆ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ. ಎಲ್ಲರೂ ಸಸಿಗಳನ್ನು ನೆಟ್ಟು ಫೋಟೋಗಳನ್ನು ಕಳಿಸುತ್ತಿದ್ದಾರೆ. ಆಯ್ದ ಫೋಟೋಗಳನ್ನು ಅನಿರುದ್ಧ್ ಶೇರ್ ಮಾಡಿಕೊಂಡಿದ್ದಾರೆ.