ಕರಣ್  ಜೋಹಾರ್ ನಿರ್ಮಾಣ ಮಾಡುತ್ತಿರುವ  ಹೊಸ ಚಿತ್ರಕ್ಕೆ ಶ್ರೀ ದೇವಿ ಅವರನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಆದರೆ ಅವರ ಅಕಾಲಿಕ ನಿಧನದಿಂದ  ಆ ಚಿತ್ರಕ್ಕೆ ಯಾರನ್ನು ಆಯ್ಕೆ ಮಾಡಿಕೊಳ್ಳುವುದು ಎಂಬ ಗೊಂದಲದಲ್ಲಿಯೇ ಇದೀಗ  ಚಿತ್ರಕ್ಕೆ  ಮಾಧುರಿ ದೀಕ್ಷಿತ್ ಅವರು ಸಹಿ ಮಾಡಿದರು.

ಮುಂಬೈ : ಕರಣ್ ಜೋಹಾರ್ ನಿರ್ಮಾಣ ಮಾಡುತ್ತಿರುವ ಹೊಸ ಚಿತ್ರಕ್ಕೆ ಶ್ರೀ ದೇವಿ ಅವರನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಆದರೆ ಅವರ ಅಕಾಲಿಕ ನಿಧನದಿಂದ ಆ ಚಿತ್ರಕ್ಕೆ ಯಾರನ್ನು ಆಯ್ಕೆ ಮಾಡಿಕೊಳ್ಳುವುದು ಎಂಬ ಗೊಂದಲದಲ್ಲಿಯೇ ಇದೀಗ ಚಿತ್ರಕ್ಕೆ ಮಾಧುರಿ ದೀಕ್ಷಿತ್ ಅವರು ಸಹಿ ಮಾಡಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದೀಗ ಶ್ರೀ ದೇವಿ ನಟಿಸಬೇಕಿದ್ದ ಜಾಗಕ್ಕೆ ಇದೀಗ ಮಾಧುರಿ ದೀಕ್ಷಿತ್ ಬಂದಿದ್ದು, ಮುಖ್ಯ ಪಾತ್ರವನ್ನು ನಿರ್ವಹಣೆ ಮಾಡುತ್ತಿದ್ದಾರೆ.

ಈ ನಿಟ್ಟಿನಲ್ಲಿ ಶ್ರೀ ದೇವಿ ಪುತ್ರಿ ಜಾಹ್ನವಿ ಕಪೂರ್ ಮಾಧುರಿ ದೀಕ್ಷಿತ್’ಗೆ ಧನ್ಯವಾದವನ್ನು ತಿಳಿಸಿದ್ದಾರೆ. ತನ್ನ ಇನ್’ಸ್ಟಾಗ್ರಾಮಲ್ಲಿ ಬರೆದುಕೊಂಡ ಜಾಹ್ನವಿ ಕಪೂರ್ , ಅಭಿಷೇಕ್ ವರ್ಮನ್ ಅವರು ನಿರ್ದೇಶನ ಮಾಡುತ್ತಿದ್ದ ಹೊಸ ಚಿತ್ರ ತಮ್ಮ ತಾಯಿಯ ಹೃದಯಕ್ಕೆ ಅತ್ಯಂತ ಹತ್ತಿರವಾಗಿತ್ತು. ಆದರೆ ಇದೀಗ ಚಿತ್ರದ ಭಾಗವಾಗುತ್ತಿರುವುದಕ್ಕೆ ಮಾಧುರಿ ಜಿ ಅವರಿಗೆ ತಮ್ಮ ಹಾಗೂ ಖುಷಿ ಕಡೆಯಿಂದ ಧನ್ಯವಾದ ಎಂದು ಹೇಳಿದ್ದಾರೆ.