ಉತ್ತರ, ದಕ್ಷಿಣ, ಹಳೇ ಮೈಸೂರು ಎನ್ನದೇ ಅಖಂಡ ಕರ್ನಾಟಕ ಅಂತ ಕೂಗುವಂತೆ ಕರೆ ನೀಡಿದ್ದಾರೆ. ವಿಶ್ವಕ್ಕೆ  ಕನ್ನಡಿಗನ ಕೂಗು ಕೇಳಿಸುತ್ತೆ  ಇದಕ್ಕೆ  ಬೇಕಿರುವುದು ಸ್ವಾಭಿಮಾನ ಮಾತ್ರ.  ಆದರೆ, ಕನ್ನಡಿಗರಿಗೆ  ಒಗ್ಗಟಿನ  ಕೊರತೆ ಇದೆ, ಈಗಲಾದ್ರೂ ಒಂದಾಗಿ ಅಂತ ಜಗ್ಗೇಶ್ ಪ್ರಾರ್ಥಿಸಿದ್ಧಾರೆ.

ಬೆಂಗಳೂರು(ಜ.21): ಸುವರ್ಣನ್ಯೂಸ್​`ನ ‘ಕಂಬಳ ಕಾಪಾಡಿ’ ಅಭಿಯಾನಕ್ಕೆ ನಟ ಜಗ್ಗೇಶ್​ ಟ್ವೀಟ್​ ಮೂಲಕ ಬೆಂಬಲ ಸೂಚಿಸಿದ್ದಾರೆ. ದಕ್ಷಿಣ ಕನ್ನಡದ ಸನಾತನ ಗ್ರಾಮೀಣ ಕ್ರೀಡೆ ಬೇಕು ಅಂತಾ ನಾನು ಕೂಗು ಹಾಕ್ತೀನಿ, ನಮ್ಮ ಹಕ್ಕು, ನಮ್ಮ ಪದ್ಧತಿ ನಿಲ್ಲಿಸಲು ಯಾರಿಗೂ ಹಕ್ಕಿಲ್ಲ ಎಂದು ಟ್ವೀಟ್ ಮಾಡಿದ್ದಾರೆ. 

ಉತ್ತರ, ದಕ್ಷಿಣ, ಹಳೇ ಮೈಸೂರು ಎನ್ನದೇ ಅಖಂಡ ಕರ್ನಾಟಕ ಅಂತ ಕೂಗುವಂತೆ ಕರೆ ನೀಡಿದ್ದಾರೆ. ವಿಶ್ವಕ್ಕೆ ಕನ್ನಡಿಗನ ಕೂಗು ಕೇಳಿಸುತ್ತೆ ಇದಕ್ಕೆ ಬೇಕಿರುವುದು ಸ್ವಾಭಿಮಾನ ಮಾತ್ರ. ಆದರೆ, ಕನ್ನಡಿಗರಿಗೆ ಒಗ್ಗಟಿನ ಕೊರತೆ ಇದೆ, ಈಗಲಾದ್ರೂ ಒಂದಾಗಿ ಅಂತ ಜಗ್ಗೇಶ್ ಪ್ರಾರ್ಥಿಸಿದ್ಧಾರೆ.

ಕನ್ನಡಿಗರು ಯಾವುದರಲ್ಲೂ ಕಮ್ಮಿಯಿಲ್ಲ, ನಮ್ಮಲ್ಲಿ ಒಗ್ಗಟ್ಟಿನ ಮಂತ್ರ ಶುರುವಾಗಬೇಕು. ನಾವೆಲ್ಲ ಒಂದಾಗಿ ನ್ಯಾಯಕ್ಕಾಗಿ ಹೋರಾಡೋಣ ಎಂದು ಟ್ವೀಟ್​ ಮೂಲಕ ಬೆಂಬಲ ಸೂಚಿಸಿದ್ದಾರೆ.