. ಜಗ್ಗೇಶ್ ಅವರಿಗೆ ಏನೇ ದುಃಖವಿರಲಿ, ಖುಷಿಯ ವಿಚಾರವಿರಲಿ, ತಮ್ಮ ಪ್ರತಿಯೊಂದು ನಿಲುವುಗಳು, ಅಭಿಪ್ರಾಯಗಳು, ಶುಭಾಶಯಗಳು ಹೀಗೆ ಎಲ್ಲವನ್ನ ಟ್ವಿಟರ್ ಮೂಲಕವೇ ಹಂಚಿಕೊಳ್ತಾರೆ.
ನವರಸ ನಾಯಕ ಜಗ್ಗೇಶ್. ಕನ್ನಡದಲ್ಲಿ ನವರಸಗಳ ಮೂಲಕ ನಟಿಸಿ ಸಿನಿಪ್ರೇಕ್ಷಕರ ಗಮನ ಸೆಳೆದಿರೋ ನಟ. ಜಗ್ಗೇಶ್ ಸಿನಿಮಾಗಳಲ್ಲಿ ಅಷ್ಟೆ ಅಲ್ಲ, ಸೋಶಿಯಲ್ ಮಿಡಿಯಾದಲ್ಲೂ ಅಷ್ಟೆ ಸಕ್ರಿಯರಾಗಿರುತ್ತಾರೆ. ಜಗ್ಗೇಶ್ ಅವರಿಗೆ ಏನೇ ದುಃಖವಿರಲಿ, ಖುಷಿಯ ವಿಚಾರವಿರಲಿ, ತಮ್ಮ ಪ್ರತಿಯೊಂದು ನಿಲುವುಗಳು, ಅಭಿಪ್ರಾಯಗಳು, ಶುಭಾಶಯಗಳು ಹೀಗೆ ಎಲ್ಲವನ್ನ ಟ್ವಿಟರ್ ಮೂಲಕವೇ ಹಂಚಿಕೊಳ್ತಾರೆ.
ಟ್ವಿಟರ್ ಒಂದು ಸಾಮಾಜಿಕ ಜಾಲತಾಣ.ಇಲ್ಲಿ ಸ್ಟಾರ್ ಸೆಲೆಬ್ರಿಟಿಗಳಿಂದ ಹಿಡಿದು, ರಾಜಕೀಯ ವ್ಯಕ್ತಿ ಹಾಗೂ ಸರ್ವೇ ಸಾಮಾನ್ಯ ಜನರು ಎಲ್ಲರೂ ಬಳಸುವಂತಹ ಮಾಧ್ಯಮವಾಗಿದೆ. ಹೀಗೆ ಈ ಟ್ವಿಟರ್ ಗೆ ಎಂಟ್ರಿ ಕೊಟ್ಟಿರೋ ಜಗ್ಗೇಶ್ ಅವರು ಪ್ರತಿದಿನ ಟ್ವೀಟ್ ಮಾಡುವ ಮೂಲಕ ಅಭಿಮಾನಿಗಳೊಂದಿಗೆ ಟಚ್'ನಲ್ಲಿ ಇರ್ತಾರೆ.
ಅಂದ್ಹಾಗೆ ಜಗ್ಗೇಶ್ ಅವರು ಟ್ವಿಟರ್ ಬರೋದಕ್ಕೂ ಕಾರಣ ಇದೆ. ತಾವು ಟ್ವಿಟರ್ ಖಾತೆ ತೆರೆಯಲು ಇವರೆ ಕಾರಣ ಅಂತ ಜಗ್ಗೇಶ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. ನೀರ್ ದೋಸೆ ಚಿತ್ರದಲ್ಲಿ ಮೂಡಿದ ವೈಮನಸ್ಸು ಒಂದಿಷ್ಟು ಬಿಟ್ರೆ ನವರಸ ನಾಯಕ ಜಗ್ಗೇಶ್ ಅವರು ತಾವು ಟ್ವಿಟರ್'ಗೆ ಬರಲು ರಮ್ಯಾ ಕಾರಣ. ಅವರು ಯಾವಾಗಲು ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುತ್ತಾರೆ. ಇನ್ನು ಸುದೀಪ್ ಅವರು ಕೂಡ. ನನಗೆ ಟ್ವಿಟರ್ ಬಗ್ಗೆ ಹೇಳಿಕೊಟ್ಟಿದ್ದೆ ಮೋಹಕ ತಾರೆ ರಮ್ಯಾ ಅಂತ ಹೇಳಿದ್ದಾರೆ. ಎಷ್ಟು ಜಗಳ ಗೊಂದಲಗಳಿದ್ದರೂ, ಅಭಿಮಾನ ಸ್ನೇಹ ಇನ್ನು ಮರೆಮಾಚಿಲ್ಲ ಅನ್ನೋದಕ್ಕೆ ಜಗ್ಗೇಶ್ ಅವರ ಈ ಮಾತೆ ಸಾಕ್ಷಿಯಾಗಿದೆ, ಇನ್ನು ಇದಕ್ಕೆ ನಟಿ ರಮ್ಯಾ ಯಾವ ರೀತಿ ರಿಯಾಕ್ಟ್ ಮಾಡ್ತಾರೆ ಅನ್ನೋದನ್ನು ಕಾದು ನೋಡ'ಬೇಕಿದೆ.
-ಶೃತಿ ಪಾಟೀಲ್, ಸುವರ್ಣ ನ್ಯೂಸ್
