ಗುರೂಗ್ರಾಮ್'ನ ಅಪಾರ್ಟ್'ಮೆಂಟ್'ನ ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ

ಗುರೂಗ್ರಾಮ್ (ಜು.18): ಬಾಲಿವುಡ್ ನಟಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹರ್ಯಾಣದ ಗುರೂಗ್ರಾಮ್ ಪಟ್ಟಣದಲ್ಲಿ ನಡೆದಿದೆ. ರಣಬೀರ್ ಕಪೂರ್ ಮತ್ತು ಕತ್ರೀನಾ ಕೈಫ್ ಅಭಿನಯದ ಜಗ್ಗಾ ಜಾಸೂಸ್ ಚಿತ್ರದಲ್ಲಿ ನಟಿಸಿದ್ದ ಬಿದಿಶಾ ಬೆಜ್‌ಬರವೂ ಗುರೂಗ್ರಾಮ್'ನ ಅಪಾರ್ಟ್'ಮೆಂಟ್'ನ ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಸ್ಸಾಮಿ ಭಾಷೆಯ ಹಲವು ಸಿನಿಮಾಗಳಲ್ಲಿಯೂ ಇವರು ನಟಿಸಿದ್ದಲ್ಲದೆ ಗಾಯಕಿಯೂ ಕೂಡ ಆಗಿದ್ದರು.ತಮ್ಮ ಪತಿ ಅನೈತಿಕ ಸಂಬಂಧ ಹೊಂದಿದ್ದ ಕಾರಣ ಅವರಿಂದ ವಿಚ್ಚೇದನ ಬಯಸಿದ್ದರು. ಅಲ್ಲದೆ ಈ ಬಗ್ಗೆ ಸ್ನೇಹಿತರು ಮತ್ತು ಕುಟುಂದವರೊಂದಿಗೆ ಹೇಳಿಕೊಂಡಿದ್ದರು ಎಂದು ಪೊಲೀಸರು ತಮ್ಮ ದೂರಿನಲ್ಲಿ ದಾಖಲಿಸಿಕೊಂಡಿದ್ದಾರೆ.ಪತಿ ಬೆಜ್ಬಾ ವಿರುದ್ಧವೂ ದೂರು ದಾಖಲಾಗಿದೆ.