ಸಿನಿಮಾ ಸ್ಟಾರ್ ನಟರು, ಸೆಲಬ್ರಿಟಿಗಳು ಏಕಾಏಕಿ ಮೇಲೆ ಬರುವುದಿಲ್ಲ. ಅದರ ಹಿಂದೆ ಶ್ರಮವಿರುತ್ತದೆ. ಬಾಲಿವುಡ್ ಖ್ಯಾತ ನಟ ಸಲ್ಮಾನ್ ಖಾನ್ ಕೂಡಾ ಇದಕ್ಕೆ ಹೊರತಾಗಿಲ್ಲ. ಸಲ್ಮಾನ್ ಖಾನ್ ಶ್ರಮದ ಬಗ್ಗೆ ನಟ ಜಾಕಿ ಶ್ರಾಫ್ ಇಂಟರೆಸ್ಟಿಂಗ್ ವಿಚಾರವೊಂದನ್ನು ಹೊರ ಹಾಕಿದ್ದಾರೆ.  

ನೆಗೆಟಿವ್ ಕಾಮೆಂಟಿಗೆ ಪ್ರಿಯಾಂಕ ಚೋಪ್ರಾ ದಿಟ್ಟ ಉತ್ತರ!

‘ಸಲ್ಮಾನ್ ಖಾನ್ ಫೋಟೋವನ್ನು ನಾನು ಪಾಕೆಟ್ ನಲ್ಲಿ ಇಟ್ಟುಕೊಂಡು ತಿರುಗಾಡುತ್ತಿದ್ದೆ. ಪ್ರೊಡ್ಯೂಸರ್ ಗಳ ಬಳಿ, ನಿರ್ದೇಶಕರ ಬಳಿ ಈ ಹುಡುಗನಿಗೊಂದು ಅವಕಾಶ ಕೊಡಿ ಎಂದು ಕೇಳುತ್ತಿದ್ದೆ. ಒಂದಲ್ಲಾ ಒಂದು ದಿನ ಈ ಹುಡುಗ ದೊಡ್ಡ ಸ್ಟಾರ್ ಆಗುತ್ತಾನೆಂದು ಗೊತ್ತಿತ್ತು. ಅವನು ಇಂದು ದೊಡ್ಡ ಸ್ಟಾರ್ ಆಗಿದ್ದಾನೆ. ಆದರೆ ನನಗಿನ್ನೂ ಚಿಕ್ಕ ಹುಡುಗನೇ’ ಎಂದು ಜಾಕಿ ಶ್ರಾಫ್ ಹೇಳಿದ್ದಾರೆ.

ಸೋಷಿಯಲ್ ಮೀಡಿಯಾಗೆ ರಕ್ಷಿತ್ ಶೆಟ್ಟಿ ಕಮ್ ಬ್ಯಾಕ್; ಮೊದಲ ಮೆಸೇಜ್ ಏನ್ ನೋಡಿ!

ಕಳೆದ ವಾರ ತೆರೆ ಕಂಡ ‘ಭಾರತ್’ ಸಿನಿಮಾದಲ್ಲಿ ಜಾಕಿ ಶ್ರಾಫ್ ಸಲ್ಮಾನ್ ತಂದೆಯಾಗಿ ನಟಿಸಿದ್ದಾರೆ. ಸಲ್ಮಾನ್ ತಂದೆಯಾಗಿ ನಟಿಸಿದ್ದಕ್ಕೆ ಖುಷಿಯಿದೆ ಎಂದಿದ್ದಾರೆ.