ಜೋಗಿ ಪ್ರೇಮ್ ಸಿನಿಮಾ ಅಂದ್ರೆ ಸಾಕು ಸ್ಟಾರ್ ನಟರ ಸಿನಿಮಾ ಎಂದೇ ಫೇಮ್ ಕ್ರಿಯೇಟ್ ಆಗಿದೆ. ಅದರಲ್ಲೂ ಪರ ಭಾಷ ನಟ-ನಟಿಯರನ್ನು ಸ್ಯಾಂಡಲ್ ವುಡ್ ಗೆ ಹೆಚ್ಚಾಗಿ ಕರೆ ತಂದಿರುವುದು ಜೋಗಿ ಪ್ರೇಮ್. ಆದರೆ ಈಗ ಅದೇ ಪ್ರೇಮ್ ಗೆ ಟಕ್ಕರ್ ಕೊಡುವುದಕ್ಕೆ ವಿಲನ್ ಆಗಿ ಜೆ.ಡಿ. ಚಕ್ರವರ್ತಿ ಇದ್ದಾರೆ.

 

ಕಾಲ್ ಶೀಟ್ ಫ್ರೀ ಇಲ್ಲದ ಸೌಟ್ ಇಂಡಿಯನ್ ನಟ ಅಂದ್ರೆ ಜೆಡಿ ಚಕ್ರವರ್ತಿ. ಬಹುತೇಕ ಸಿನಿಮಾಗಳಲ್ಲಿ ನಟಿಸಿ ಬಿಗ್ ಫ್ಯಾನ್ ಫಾಲೋವರ್ ಇರುವ ಜೆಡಿ ಇದೀಗ ಜೋಗಿ ಪ್ರೇಮ್ ಅಭಿನಯದ ’ಗಾಂಧಿಗಿರಿ’ ಸಿನಿಮಾದಲ್ಲಿ ಡಬಲ್ ಶೇಡ್ ಪಾತ್ರದಲ್ಲಿ ಪ್ರೇಮ್ ಗೆ ವಿಲನ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಧ್ರುವ ಸರ್ಜಾ ಅಭಿನಯದ ‘ಕಾಂಟ್ರ್ಯಾಕ್ಟ್’ ಸಿನಿಮಾದಲ್ಲೂ ಅಭಿನಯಿಸಿದ್ದು ರಿಲೀಸ್ ಗೆ ಚಿತ್ರ ಸಿದ್ಧವಾಗುತ್ತಿದೆ.

ಸ್ಯಾಂಡಲ್‌ವುಡ್‌ಗೆ ರಕ್ಷಿತಾ ಪ್ರೇಮ್‌ ಸೋದರ ರಾಣಾ ಎಂಟ್ರಿ!

ರಘುಹಾಸನ್ ಗಾಂಧಿಗಿರಿ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದು ತುಪ್ಪದ ಹುಡುಗಿ ಪ್ರೇಮ್ ಗೆ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.