ಪ್ರಿಯಾಂಕ ಚೋಪ್ರಾ ಈ ಗಾಯಕನೊಂದಿಗೆ ಡೇಟಿಂಗ್ ಮಾಡ್ತಿದ್ದಾರಂತೆ!

Is Priyanka Chopra dating Nick Jonas
Highlights

ಬಾಲಿವುಡ್ ಬ್ಯೂಟಿ ಪಿಗ್ಗಿ ಬಗ್ಗೆ ಆಗಾಗ ಏನಾದರೂ ಗುಸು ಗುಸು ಕೇಳುತ್ತಲೇ ಇರುತ್ತದೆ. ಇದೀಗ ಅಮೆರಿಕದ ಖ್ಯಾತ ಗಾಯಕನೊಂದಿಗೆ ಡೇಟಿಂಗ್ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ. 

ಪ್ರಿಯಾಂಕ ಚೋಪ್ರಾ ಈ ಗಾಯಕನೊಂದಿಗೆ ಡೇಟಿಂಗ್ ಮಾಡ್ತಿದ್ದಾರಂತೆ!

ಬಾಲಿವುಡ್ ಬ್ಯೂಟಿ ಪಿಗ್ಗಿ ಬಗ್ಗೆ ಆಗಾಗ ಏನಾದರೂ ಗುಸು ಗುಸು ಕೇಳುತ್ತಲೇ ಇರುತ್ತದೆ. ಇದೀಗ ಅಮೆರಿಕದ ಖ್ಯಾತ ಗಾಯಕನೊಂದಿಗೆ ಡೇಟಿಂಗ್ ನಡೆಸುತ್ತಿದ್ದಾರೆನ್ನಲಾಗುತ್ತಿದೆ. 

 

ಅಮೆರಿಕದ ಗಾಯಕ, ಗೀತ ರಚನೆಕಾರ ನಿಕ್ ಜೋನಾಸ್ ಅವರೊಂದಿಗೆ ಪ್ರಿಯಾಂಕಾ ಚೋಪ್ರಾ ಸುತ್ತುತ್ತಿದ್ದಾರೆಂಬ ಸುದ್ದಿಯಾಗುತ್ತಿದೆ. 1917ರಲ್ಲಿ ಮೆಟ್ ಗಾಲದಲ್ಲಿ ನಿಕ್ ಅವರನ್ನು ಭೇಟಿಯಾಗಿದ್ದ ಪಿಗ್ಗಿ, ನಂತರ ಅನೇಕ ಕಾರ್ಯಕ್ರಮಗಳಲ್ಲಿ ಜತೆಯಾಗಿ ಕಾಣಿಸಿಕೊಂಡಿದ್ದರು. ಇತ್ತೀಚೆಗೆ ಹಾಲಿವುಡ್‌ನ ಫ್ರೈಡೇಸ್ ಬ್ಯೂಟಿ ಆ್ಯಂಡ್ ದಿ ಬೀಸ್ಟ್ ಕಚೇರಿಯಲ್ಲಿಯೂ ಈ ಜೋಡಿ ಜತೆಯಾಗಿ ಕಾಣಿಸಿಕೊಂಡಿತ್ತು.

ಈ ಜೋಡಿ ಅಲ್ಲಲ್ಲಿ ಸುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಶೇರ್ ಆಗಿದ್ದು, ಇದೀಗ ಸಿಕ್ಕಾಪಟ್ಟೆ ಸುದ್ದಿಯಾಗಿದ್ದಾರೆ. ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಪಿಗ್ಗಿ ನಿರೂಪಕಿಯೊಬ್ಬರು, 'ನಿಮಗಿಂತ 10 ವರ್ಷ ಕಿರಿಯವನಾದ ನಿಕ್ ಅವರೊಂದಿಗೆ ಡೇಟಿಂಗ್ ಮಾಡುತ್ತಿರುವ ಸುದ್ದಿ ಹರಿದಾಡುತ್ತಿದೆಯಲ್ಲಾ?' ಎಂದು ಕೇಳಿದ್ದರು. ಅದಕ್ಕೆ ಪಿಗ್ಗಿ ಉತ್ತರಿಸಿದ್ದೇನು ಗೊತ್ತಾ? 

'ರಾಲ್ಪ್ ಲಾರೆನ್ ಬಟ್ಟೆ ತೊಟ್ಟ ಇಬ್ಬರೂ ಜತೆಗೆ ಹೋಗಲು ನಿರ್ಧರಿಸಿದೆವು. ನಿಕ್ ವಯಸ್ಸು ನಂಗೆ ಗೊತ್ತೂ ಇಲ್ಲ, ಕೇಳಿಯೂ ಇಲ್ಲ. ಮೊದಲೇ ಪರಿಚಯವಿದ್ದರಿಂದ ಜತೆಯಾಗಿ ತೆರಳಿದವು, ಅಷ್ಟೇ,' ಎನ್ನುವ ದಾಟಿಯಲ್ಲಿ ಉತ್ತರಿಸಿದ್ದಾರೆ.

ಇಂಥ ವಿಷಯಗಳನ್ನು ಯಾವ ನಟರೂ ಬೇಗ ಒಪ್ಪಿಕೊಳ್ಳುವುದಿಲ್ಲ. ಪ್ರಿಯಾಂಕಾ ವಿಷಯ ಏನಾಗುತ್ತೋ ನೋಡೋಣ.

loader