ಅಲಿಯಾ ಮೇಲೆ ಕತ್ರಿನಾಗೆ ಹೊಟ್ಟೆಕಿಚ್ಚಾ?

Is Katrina Kaif's cryptic message for new lovebirds Ranbir and Alia?
Highlights

‘ಐ ವಿಲ್ ಬಿಲೀವ್ ಇಟ್ ವೆನ್ ಐ ಸೀ ಇಟ್. ಆರ್ ಐ ವಿಲ್ ಸೀ ಇಟ್ ವೆನ್ ಐ ಬಿಲೀವ್ ಇಟ್’. - ಹೀಗೊಂದು ಕೈ ಬರಹವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ ಕತ್ರಿನಾ ಕೈಫ್. ಕತ್ರಿನಾ ಈ ಪೋಸ್ಟ್ ಮಾಡುತ್ತಿದ್ದಂತೆಯೇ ಎಲ್ಲರೂ ಏನು, ಯಾಕೆ, ಎತ್ತ ಎನ್ನುವ ಪ್ರಶ್ನೆಗಳನ್ನು ಎತ್ತಿಕೊಂಡಿದ್ದಾರೆ.

‘ಐ ವಿಲ್ ಬಿಲೀವ್ ಇಟ್ ವೆನ್ ಐ ಸೀ ಇಟ್. ಆರ್ ಐ ವಿಲ್ ಸೀ ಇಟ್ ವೆನ್ ಐ ಬಿಲೀವ್ ಇಟ್’. - ಹೀಗೊಂದು ಕೈ ಬರಹವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ ಕತ್ರಿನಾ ಕೈಫ್. ಕತ್ರಿನಾ ಈ ಪೋಸ್ಟ್
ಮಾಡುತ್ತಿದ್ದಂತೆಯೇ ಎಲ್ಲರೂ ಏನು, ಯಾಕೆ, ಎತ್ತ ಎನ್ನುವ ಪ್ರಶ್ನೆಗಳನ್ನು ಎತ್ತಿಕೊಂಡಿದ್ದಾರೆ. ಅದಕ್ಕೆ ತಮ್ಮತಮ್ಮ ನೋಟಾನುಸಾರ ಉತ್ತರಗಳನ್ನೂ ಹೆಣೆದಿದ್ದಾರೆ.

ಹಿಂದೆ ರಣಬೀರ್ ಮತ್ತು ಕತ್ರಿನಾ ಒಟ್ಟಿಗೆ ಲವ್ವಿ ಡವ್ವಿ ಆಡಿದ್ದು ಗೊತ್ತಿದ್ದವರು ಈಗ ರಣಬೀರ್ ಮತ್ತು ಆಲಿಯಾ ಭಟ್ ಜೊತೆಯಾಗಿದ್ದಾರೆ, ಮೀಟಿಂಗು, ಡೇಟಿಂಗು ಅಂತ ಜೊತೆಯಲ್ಲೇ ಕಾಲ ಕಳೆಯುತ್ತಿದ್ದಾರೆ. ಇದೇ ಕಾರಣಕ್ಕೆ ಕತ್ರಿನ  ಹೀಗೆಲ್ಲಾ ಹೇಳಿಕೊಂಡಿದ್ದಾಳೆ ಎಂದು ಅಂದಾಜು ಮಾಡಿದ್ದಾರೆ. ಬಾಲಿವುಡ್‌ನ ಹೆಚ್ಚು ಮಂದಿ ಈ ಅಂದಾಜನ್ನು ಅನುಮೋದನೆ ಕೂಡ ಮಾಡಿದ್ದಾರೆ. ಕತ್ರಿನಾಗೆ ಮೊದಲಿನಿಂದಲೂ ರಣಬೀರ್ -ಆಲಿಯಾ ಕೆಮಿಸ್ಟ್ರಿಯ ಬಗ್ಗೆ ನಂಬಿಕೆ ಇರಲಿಲ್ಲ. ಕಣ್ಣಾರೆ ಕಾಣದೇ ಯಾವುದನ್ನೂ ನಂಬಲಾರೆ ಎನ್ನುವ ನಿರ್ಧಾರಕ್ಕೆ ಬಂದಿದ್ದಳು.

ಈಗ ಸೋಷಿಯಲ್ ಮೀಡಿಯಾಗಳಲ್ಲಿ ಇವರಿಬ್ಬರ ಗುಸುಗುಸು ಅಬ್ಬರ ಜೋರಾದ ಹಿನ್ನೆಲೆಯಲ್ಲಿ  ಇಂಥದ್ದೊಂದು ಸ್ಪಷ್ಟನೆಯನ್ನು ಅಸ್ಪಷ್ಟವಾಗಿ ರವಾನೆ ಮಾಡುವ ಮೂಲಕ ಮಾಜಿ ಪ್ರೇಯಸಿ
ರಣಬೀರ್ ಆಲಿಯಾ ಜೊತೆಗಿನ ಸಂಬಂಧವನ್ನು ನಿರಾಕರಣೆ ಮಾಡಿದ್ದಾರೆ ಎನ್ನಿಸುತ್ತದೆ.  

 

loader