1. ಸದ್ಯಕ್ಕೆ ಕೃಷ್ಣ ಅವರು ‘ಪೈಲ್ವಾನ್‌’ ಸಂಭ್ರಮದಲ್ಲಿದ್ದಾರೆ. ಎಲ್ಲ ಕಡೆ ಸಿನಿಮಾ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದೆ. ನಿರ್ದೇಶನದ ಜತೆಗೆ ನಿರ್ಮಾಣ ಕೂಡ ಅವರದ್ದೇ ಆಗಿರುವ ಕಾರಣ ಅದರ ಗಳಿಕೆಯ ಲೆಕ್ಕಾಚಾರದಲ್ಲಿದ್ದಾರೆ ಕೃಷ್ಣ.

2. ಈ ನಡುವೆ ‘ಪೈಲ್ವಾನ್‌’ ಚಿತ್ರ ಚೀನಿ ಭಾಷೆಗೆ ಡಬ್‌ ಆಗುತ್ತಿದೆ. ಅದರ ಟ್ರೇಲರ್‌ ಕೂಡ ಬಂದಿದೆ ಎಂಬುದು ಚಿತ್ರತಂಡದ ಮತ್ತೊಂದು ಸಂತಸದ ಸುದ್ದಿ.

ಕುರುಕ್ಷೇತ್ರ ಸಂಭಾವನೆಯನ್ನು ನೆರೆ ಸಂತ್ರಸ್ತರಿಗೆ ನೀಡಿದ ನಿಖಿಲ್ ಕುಮಾರಸ್ವಾಮಿ!

3. ತಮ್ಮ ‘ಪೈಲ್ವಾನ್‌’ ಚಿತ್ರದ ಸಂಭ್ರಮದಲ್ಲೇ ಕೃಷ್ಣ ಅವರು ನಿಖಿಲ್‌ ಕುಮಾರ್‌ ಅವರಿಗಾಗಿಯೇ ಒಂದು ಕತೆ ಮಾಡಿಕೊಂಡು ಹೇಳಿದ್ದಾರೆ.

4. ನಿಖಿಲ್‌ ತಮ್ಮ ರಾಜಕೀಯ ಬ್ಯುಸಿ ನಡುವೆಯೂ ಕೃಷ್ಣ ಅವರು ಮಾಡಿಕೊಂಡಿದ್ದ ಕತೆ ಕೇಳಿ ಓಕೆ ಮಾಡಿದ್ದಾರೆ.

5. ಈ ಬಿಡುವಿನ ವೇಳೆಯಲ್ಲೇ ಕೃಷ್ಣ ಅವರು ಹೇಳಿದ ಕತೆಗೆ ತಮ್ಮನ್ನು ತಯಾರು ಮಾಡಿಕೊಳ್ಳುತ್ತಿದ್ದಾರೆ ನಿಖಿಲ್‌ ಕುಮಾರ್‌. ಡ್ಯಾನ್ಸ್‌, ಫೈಟ್‌ಗಳಿಗಾಗಿ ವಿಶೇಷವಾದ ತರಬೇತಿ ಮಾಡಿಕೊಳ್ಳುತ್ತಿದ್ದಾರೆ.

ಪೈಲ್ವಾನ್ ಪೈರಸಿ ಆಯ್ತು; ಈಗ ಕಿಟ್ಟಪ್ಪಂಗೆ ನಿಖಿಲ್ ಕುಮಾರಸ್ವಾಮಿನೇ ಗತಿ?

6. ಸದ್ಯಕ್ಕೆ ಕತೆಯ ಒಂದು ಸಾಲು ನಿಖಿಲ್‌ ಅವರಿಗೆ ಇಷ್ಟವಾಗಿದೆ. ಇನ್ನೂ ಅವರ ಪಾತ್ರ, ಚಿತ್ರಕತೆ, ನಿರ್ಮಾಣದ ವೆಚ್ಚ, ಎಷ್ಟುಭಾಷೆಗಳಿಗೆ ಎಂಬುದು ಇನ್ನಷ್ಟೆನಿರ್ಧಾರವಾಗಬೇಕಿದೆ.

7. ಸುದೀಪ್‌ ಅವರ ಕಾಲ್‌ಶೀಟ್‌ ಸಿಗುವ ಹೊತ್ತಿಗೆ ಇತ್ತ ಕೃಷ್ಣ ಅವರು ನಿಖಿಲ್‌ ಕುಮಾರ್‌ ಜತೆ ಒಂದು ಅದ್ದೂರಿ ಸಿನಿಮಾ ಮಾಡುವ ಪ್ಲಾನ್‌ ಮಾಡಿಕೊಂಡಿದ್ದು, ಎರಡು ಕತೆಗಳ ಪೈಕಿ ಒಂದನ್ನು ನಿಖಿಲ್‌ ಅವರು ಓಕೆ ಮಾಡಿದ್ದಾರೆ.

8. ಈ ಚಿತ್ರದ ನಿರ್ಮಾಣ ಸಂಸ್ಥೆ ಲೈಕಾ ಕಂಪನಿಯೂ ಕತೆ ಒಪ್ಪಿಕೊಂಡಿದೆ. ಉಳಿದ ವಿವರಣೆಗಳು ಸದ್ಯದಲ್ಲೇ ಹೊರ ಬೀಳಲಿವೆ.