ಬರಾಕ್ ಒಬಾಮ
2009ರಲ್ಲಿ ಒಬಾಮ ಶಾಲೆಯೊಂದಕ್ಕೆ ಭೇಟಿ ನೀಡಿದ್ದಾಗ ಅಲ್ಲಿ ಒಬ್ಬ ಹುಡುಗ, ನೀವು ನಿಮ್ಮ ಜೊತೆಯಲ್ಲಿ ಯಾರ ಜೊತೆಗಾದರೂ ಕೆಲವು ಕ್ಷಣಗಳನ್ನು ಕಳೆಯಬೇಕು ಎಂದು ತೀವ್ರವಾಗಿ ಬಯಸುತ್ತೀರಿ ಎಂದಾದರೆ ಯಾರ ಜೊತೆಗೆ ಎಂಬ ಪ್ರಶ್ನೆ ಕೇಳಿದ.  ಅದಕ್ಕೆ  ಒಬಾಮ ಹೇಳಿದ್ದು: ಮಹಾತ್ಮ ಗಾಂಧಿ, ನನ್ನ ಬದುಕಿನ ರಿಯಲ್ ಹೀರೋ.

ಆಂಗ್ ಸಾನ್ ಸೂಕಿ
ನೊಬೆಲ್ ಶಾಂತಿ ಪ್ರಶಸ್ತಿ ವಿಜೇತೆ ಆಂಗ್ ಸಾನ್ ಸೂಕಿ ಜಗತ್ತಿನ ಗಮನ ಸೆಳೆದ ಹೋರಾಟಗಾರ್ತಿ. ಅವರು 2012ರ ಇಸವಿಯಲ್ಲಿ ಕಾಲೇಜೊಂದಕ್ಕೆ ಭೇಟಿ ನೀಡಿದ್ದಾಗ, ನನ್ನ ಬದುಕಿನಲ್ಲಿ ತುಂಬಾ ಪ್ರಭಾವಿಸಿದವರು ಮಹಾತ್ಮ ಗಾಂಧಿ ಎಂದಿದ್ದರು. ಅಲ್ಲದೇ ವಿದ್ಯಾರ್ಥಿಗಳಿಗೆ ಗಾಂಧೀಜಿಯವರ ಪುಸ್ತಕಗಳನ್ನು ಓದುವಂತೆ ತಿಳಿಸಿದ್ದರು. ನೆಲ್ಸನ್ ಮಂಡೇಲ ಜಗತ್ತು ಕಂಡ ಶ್ರೇಷ್ಠ ವ್ಯಕ್ತಿ.

ನೆಲ್ಸನ್ ಮಂಡೇಲ 
ತನ್ನ ಜೀವನದ ಮಹತ್ವದ ಗುರುಗಳಲ್ಲಿ ಗಾಂಧೀಜಿ ಒಬ್ಬರು ಎಂದು ಯಾವಾಗಲೂ ಹೇಳುತ್ತಿದ್ದರು. ದಕ್ಷಿಣ ಆಫ್ರಿಕಾದ ಸ್ಥಿತಿ ಗತಿ ಬದಲಾವಣೆಯಲ್ಲಿ ಗಾಂಧೀಜಿಯವರ ಪಾತ್ರ ದೊಡ್ಡದಿದೆ ಎಂದು ಅವರು ನಂಬಿದ್ದರು. ಅಲ್ಲದೆ ಗಾಂಧೀಜಿ ನಡೆದ ಪಥದಲ್ಲಿ ಅವರೂ ನಡೆದಿದ್ದರು. 

ದಲಾಯಿ ಲಾಮ
ಗಾಂಧೀಜಿ ಒಬ್ಬ ಶ್ರೇಷ್ಠ ವ್ಯಕ್ತಿ. ಮನುಷ್ಯ ಸ್ವಭಾವವನ್ನು ಅವರು ಆಳದಿಂದ ಅರ್ಥ ಮಾಡಿಕೊಂಡಿದ್ದರು. ಅವರ ಬದುಕು ನನ್ನನ್ನು ತುಂಬಾ ಪ್ರಭಾವಿಸಿದೆ ಎಂದು ದಲಾಯಿ ಲಾಮ ಹೇಳಿಕೊಂಡಿದ್ದನ್ನು ನೆನಪಿಸಿಕೊಳ್ಳಬಹುದು. ದಲಾಯಿ ಲಾಮ ತನ್ನ ಹೋರಾಟದ ಬದುಕಿನಲ್ಲಿ ಗಾಂಧೀಜಿಯ ತತ್ವಗಳನ್ನು ಅಳವಡಿಸಿಕೊಂಡಿದ್ದರು.

ಮಾರ್ಟಿನ್ ಲೂಥರ್ ಕಿಂಗ್ ಜೂ.
ಕ್ರೈಸ್ತ ನಮಗೆ ಗುರಿ ತೋರಿಸಿದರು. ಗಾಂಧೀಜಿ ನಮಗೆ ಗುರಿ ಸೇರುವ ತಂತ್ರ ಕಲಿಸಿದರು. ಇದು ಮಾರ್ಟಿನ್ ಲೂಥರ್ ಕಿಂಗ್ ಜೂ ಅವರ ಪ್ರಸಿದ್ಧ ಹೇಳಿಕೆ. ಅಮೆರಿಕಾದ ಈ ಹೋರಾಟಗಾರ ಗಾಂಧೀಜಿಯ ಅಹಿಂಸೆಯ ತತ್ವಗಳನ್ನು ಅಳವಡಿಸಿಕೊಂಡಿದ್ದರು. ಅವರನ್ನು ಗಾಂಧೀಜಿ ತುಂಬಾ ಪ್ರಭಾವಿಸಿದ್ದರು.

ಆಲ್ಬರ್ಟ್ ಐನ್‌ಸ್ಟೈನ್
ವಿಜ್ಞಾನಿ ಐನ್‌ಸ್ಟೈನ್ ಮತ್ತು ಗಾಂಧೀಜಿ ಪರಸ್ಪರ ಅಪಾರ ಗೌರವ ಹೊಂದಿದ್ದರು. ಅವರ ಮಧ್ಯೆ ಪತ್ರ ವ್ಯವಹಾರವೂ ಇತ್ತು. ಐನ್‌ಸ್ಟೈನ್ ಗಾಂಧೀಜಿಯ ಬಗ್ಗೆ ಒಂದೆಡೆ ಹೀಗೆ ಬರೆದಿದ್ದಾರೆ; ಗಾಂಧೀಜಿ ತತ್ವಗಳು ನಮ್ಮ ಕಾಲದ ಬಹುತೇಕರಲ್ಲಿ ಜ್ಞಾನದ ಬೆಳಕನ್ನು ಹರಿಸಿದವು. ಅವರು ಎಲ್ಲರ ಪಾಲಿನ ರೋಲ್ ಮಾಡೆಲ್.

ಅಲ್ ಗೋರ್
ಅಮೆರಿಕಾದ ಮಾಜಿ ಉಪಾಧ್ಯಕ್ಷ ಮತ್ತು ಪರಿಸರವಾದಿ ಅಲ್ ಗೋರ್ ಜಾಗತಿಕ ತಾಪಮಾನ ಏರುತ್ತಿರುವ ವಿರುದ್ಧದ ತಮ್ಮ ಹೋರಾಟದಲ್ಲಿ ತನ್ನನ್ನು ಮುನ್ನ ಡೆಸಿದ್ದು ಗಾಂಧಿ ಎಂದು ಹೇಳಿಕೊಂಡಿದ್ದರು. ಗಾಂಧೀಜಿಯ ಸತ್ಯಾಗ್ರಹ ತತ್ವ ತುಂಬಾ ಶಕ್ತಿಶಾಲಿ ಆಯುಧ, ಅದರಿಂದ ನಾವು ಪ್ರಾಮಾಣಿಕವಾಗಿ ಹೋರಾಟ ನಡೆಸುವುದು ಸಾಧ್ಯ ಎಂದು ಹೇಳಿದ್ದರು.

ಸ್ಟೀವ್ ಜಾಬ್ಸ್
ಆ್ಯಪಲ್ ಜನಕ ಸ್ಟೀವ್ ಜಾಬ್ಸ್ ಒಂದು ಹಂತದಲ್ಲಿ ಸೋತು ಹೋಗಿದ್ದ. ಆತ ಮತ್ತೆ 1997ರಲ್ಲಿ ಮತ್ತೆ ಫೀನಿಕ್ಸ್‌ನಂತೆ ಎದ್ದು ಬಂದಿದ್ದರ ಹಿಂದೆ ಮಹಾತ್ಮ ಗಾಂಧಿಯವರ ಪ್ರಭಾವ ದೊಡ್ಡದಿದೆ. ಗಾಂಧೀಜಿಯವರ ಮಾತು ಮತ್ತು ತತ್ವ ಸ್ಟೀವ್ ಜಾಬ್ಸ್ ಮಾತಿನಲ್ಲಿ, ಬದುಕಿನಲ್ಲಿ ಪ್ರಭಾವ ಬೀರಿದ್ದು ಸ್ಪಷ್ಟವಾಗಿ ಕಾಣಬಹುದಾಗಿತ್ತು. 

ವಿಲ್ ಡ್ಯುರಾಂಟ್,  ಅಮೆರಿಕಾದ ಪ್ರಸಿದ್ಧ ಇತಿಹಾಸಕಾರ ಮತ್ತು ಬರಹಗಾರ 
ವಿಲ್ ಡ್ಯುರಾಂಟ್  ಅವರಿಗೆ ಗಾಂಧೀಜಿ ತುಂಬಾ ಇಷ್ಟವಾಗಿದ್ದರು. ಬುದ್ಧನ ನಂತರ ಅವರು ಗಾಂಧೀಜಿಯನ್ನು ಕಂಡಿದ್ದರು. ಒಬ್ಬ ಸಂತ ಅಹಿಂಸಾ ಕ್ರಾಂತಿ ಮಾಡಿದ ಎಂದು ಅವರು ಬರೆದುಕೊಂಡಿದ್ದರು. ಗಾಂಧೀಜಿಯ ತತ್ವಗಳು ಅವರಿಗೆ ಬಹಳ ಪ್ರಭಾವಿಸಿತ್ತು.

ಗಾಂಧಿ ಜಯಂತಿ ವಿಶೇಷ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ರಿಚರ್ಡ್ ಅಟೆನ್‌ಬರ್ಗ್ ಖ್ಯಾತ ಚಿತ್ರ ನಿರ್ದೇಶಕ 
ರಿಚರ್ಡ್ ಅಟೆನ್‌ಬರ್ಗ್ ಮೇಲೆ ಗಾಂಧಿ ಪ್ರಭಾವ ಎಷ್ಟಿತ್ತೆಂದರೆ ಅವರು ಗಾಂಧಿ ಚಿತ್ರವನ್ನು ನಿರ್ದೇಶನ ಮಾಡಿದರು. ಆ ಚಿತ್ರಕ್ಕೆ ಆಸ್ಕರ್ ಪ್ರಶಸ್ತಿ ಸಿಕ್ಕಿತ್ತು. ಅಹಿಂಸೆ ಅನ್ನುವುದು ಹೇಡಿಯ ಸ್ವತ್ತಲ್ಲ, ಅದು ಶಕ್ತಿಶಾಲಿಯ ಆಯುಧ ಎಂದು ಗಾಂಧಿ ಹೇಳಿದ್ದನ್ನು ಜಗತ್ತಿನ ಎಲ್ಲಾ ಕಡೆ ಹೇಳುತ್ತಿದ್ದರು.