ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ ಮತ್ತೊಬ್ಬ ನಟಿ: ತೆರೆಯ ಹಿಂದಿನ ಕರಾಳ ಮುಖ ಬಿಚ್ಚಿಟ್ಟ ತಾರೆ

First Published 13, Mar 2018, 7:18 PM IST
Ileana DCruz Opens Up About The Dark Side Of Bollywood
Highlights

ಕಾಸ್ಟಿಂಗ್ ಕೌಚ್ಕಲಾವಿದನ ವೃತ್ತಿ ಜೀವನವನ್ನೇ ಅಂತ್ಯಹಾಡಬಹುದು. ಭಾರತದಲ್ಲಿ ತೆರೆಯ ಮೇಲೆ ನಟರು ತುಂಬಾ ಒಳ್ಳೆಯವರಾಗಿರುತ್ತಾರೆ

ಮುಂಬೈ(ಮಾ.13):‘ಕಾಸ್ಟಿಂಗ್ ಕೌಚ್’ ಬಗ್ಗೆ ಬಹುಭಾಷಾ ನಟಿ ಇಲಿಯಾನಾ ಸತ್ಯ ಬಿಚ್ಚಿಟ್ಟಿದ್ದಾರೆ. ಈ ಬಗ್ಗೆ ಮಾಧ್ಯಮವೊಂದಕ್ಕೆ ಮಾತನಾಡಿರುವ ಅವರು ' ‘ಭಾರತದಲ್ಲಿ ಚಿತ್ರನಟರು ಪೂಜಿಸಲ್ಪಡುತ್ತಾರೆ’. ಇದು ಬಹುತೇಕರ ವಿಷಯದಲ್ಲಿ ಬದಲಾವಣೆ ಬಯಸುತ್ತದೆ. ಭಾರತದಲ್ಲಿ ‘ಕಾಸ್ಟಿಂಗ್ ಕೌಚ್’ ಹಾವಳಿ ತುಂಬಾ ಹೆಚ್ಚಾಗಿದೆ. ‘ಕಾಸ್ಟಿಂಗ್ ಕೌಚ್’ ಬಗ್ಗೆ ಮಾತನಾಡಿದರೆ ಪರಿಣಾಮ ಎದುರಿಸಬೇಕು. ‘ಕಾಸ್ಟಿಂಗ್ ಕೌಚ್’ ಕಲಾವಿದನ ವೃತ್ತಿ ಜೀವನವನ್ನೇ ಅಂತ್ಯಹಾಡಬಹುದು.

ಭಾರತದಲ್ಲಿ ತೆರೆಯ ಮೇಲೆ ನಟರು ತುಂಬಾ ಒಳ್ಳೆಯವರಾಗಿರುತ್ತಾರೆ. ಆದರೆ ಅವರ ಹಿಂದೆ ಒಂದು ಕರಾಳ ಮುಖವಿರುತ್ತದೆ. ನಟರೆಂದರೆ ಒಂಥರಾ ದೊಡ್ಡ ನಕ್ಷತ್ರಗಳು ಎಂದು ಎಲ್ಲರೂ ಭಾವಿಸುತ್ತಾರೆ. ‘ದೊಡ್ಡ ನಕ್ಷತ್ರಗಳ ಹಿಂದಿನ ಕೊಳಕು’ ಹುಡುಕಲು ಜನರಿಗೆ ಅನೇಕ ಧ್ವನಿಗಳು ಬೇಕು. ಮನರಂಜನಾ ಉದ್ಯಮದಲ್ಲಿ ಲೈಂಗಿಕ ದುರುಪಯೋಗ ತುಂಬಾ ಇದೆ' ಎಂದು ತಿಳಿಸಿದ್ದಾರೆ.

loader