ಬೆಂಗಳೂರು (ಮೇ. 07): ರಮೇಶ್ ಅರವಿಂದ್ ಸಾರಥ್ಯದಲ್ಲಿ ಸುವರ್ಣ ವಾಹಿನಿ ಕೋಟ್ಯಧಿಪತಿ ಕಾರ್ಯಕ್ರಮ ಆರಂಭಿಸಲಿರುವುದು ಜಗಜ್ಜಾಹೀರಾಗಿದೆ. ಇದೀಗ ಕೋಟ್ಯಧಿಪತಿ ಸ್ಪರ್ಧೆಗೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಆರಂಭವಾಗಿದೆ.
ಸಾರ್ವಜನಿಕರಿಗೆ ಕೋಟ್ಯಧಿಪತಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ನೀಡುವುದಕ್ಕೆಂದೇ ಸುವರ್ಣ ವಾಹಿನಿ ಯೋಜನೆಯೊಂದನ್ನು ಹಾಕಿಕೊಂಡಿದೆ.

ಇಂದು ರಾತ್ರಿಯಿಂದ ಹತ್ತು ದಿನಗಳ ಕಾಲ ಪ್ರತಿರಾತ್ರಿ 7.30 ಕ್ಕೆ ಸಾರ್ವಜನಿಕರ ಮುಂದೆ ಪ್ರಶ್ನೆಯೊಂದನ್ನು ಇಡಲಾಗುತ್ತದೆ. ಆ ಪ್ರಶ್ನೆಗೆ ಸರಿಯಾದ ಉತ್ತರ ನೀಡುವ ಅದೃಷ್ಟವಂತರಿಗೆ ರಮೇಶ್ ಎದುರು ಹಾಟ್‌ಸೀಟಲ್ಲಿ ಕೂರುವ ಅವಕಾಶ ದೊರೆಯಲಿದೆ. ಎಸ್ಸೆಮ್ಮೆಸ್ ಅಥವಾ  ದೂರವಾಣಿ ಕರೆ ಮಾಡಿ ಉತ್ತರಗಳನ್ನು ಸೂಚಿಸುವುದಕ್ಕೆ ಅವಕಾಶವಿದೆ.

KK<Space> ನಿಮ್ಮ ಉತ್ತರ A/B/C/D <Space ಗಂಡು/ಹೆಣ್ಣು/ಇತರ (M/F/O)<Space> ವಯಸ್ಸನ್ನು (ಉದಾ: 27) 57827 ಗೆ ಎಸ್ಎಂಎಸ್ ಕಳಿಸಬಹುದು ಅಥವಾ ನಿಮ್ಮ ಉತ್ತರ Option A ಆದಲ್ಲಿ 5057827-61ಕ್ಕೆ ಕರೆ ಮಾಡಿ, Option  B ಆದಲ್ಲಿ 5057827 -62, Option C ಆದಲ್ಲಿ 5057827-63  Option D ಆದಲ್ಲಿ 5057827-64ಗೆ ಕರೆ ಮಾಡಬಹುದು.