ಚಿಕ್ಕಂದಿನಿಂದಲೂ ಆಲಿಯಾಗೆ ತಿನ್ನುವುದು, ನಿದ್ದೆ ಮಾಡುವುದೆಂದರೆ ಸಖತ್ ಇಷ್ಟ. ಶಾಲೆಯಲ್ಲೂ ಆಕೆ ನಿದ್ದೆ ಮಾಡುತ್ತಿದ್ದಳಂತೆ, ಆದರೆ ಕ್ಲಾಸ್ ರೂಮಿನಲ್ಲಲ್ಲ, ಬಾತ್ ರೂಮಲ್ಲಿ. ಆಗಾಗ ತರಗತಿಯಿಂದ ಆಲಿಯಾ ಮಾಯವಾಗುವುದನ್ನು ನೋಡಿ ಶಿಕ್ಷಕಿಗೆ ಅನುಮಾನ ಬಂದಿತ್ತು. ಎಲ್ಲಿದ್ದಾಳೆ ಅಂತಾ ಹುಡಿಕಿಕೊಂಡು ಬಂದ ಟೀಚರ್ ಬಾತ್ ರೂಮಿನಲ್ಲಿ ನಿದ್ದೆ ಮಾಡುತ್ತಿದ್ದ ಆಲಿಯಾಳನ್ನು ಎಳೆದು ತಂದಿದ್ದರಂತೆ.

ಮುಂಬೈ(ನ.16): ಬಾಲಿವುಡ್'ನಲ್ಲಿ ಡಿಯರ್ ಜಿಂದಗಿ ಚಿತ್ರದ ಮೂಲ್ಕ ಸೌಂಡ್ ಮಾಡುತ್ತಿರುವ ಆಲಿಯಾ ಭಟ್ ಈಗ ಮುಜುಗರಕ್ಕೀಡಾಗಿದ್ದಾರೆ. ಡಿಯರ್ ಜಿಂದಗಿ ಚಿತ್ರದ ಪ್ರಮೋಷನ್'​ನಲ್ಲಿ ಬ್ಯುಸಿಯಾಗಿರುವ ಈ ನಟಿ ತಮ್ಮ ಬಾಲ್ಯದ ಸೀಕ್ರೆಟ್ ಒಂದನ್ನು ಬಾಯ್ಬಿಟ್ಟಿದ್ದಾರೆ.