ಮುಂಬೈ : ತಮಗೆ ಲೈಂಗಿಕತೆ ಬಗ್ಗೆ ತೋರಿಸುವುದಕ್ಕೆ ಸಂತೋಷವಾಗುತ್ತದೆ ಎಂದು ಹಿಂದಿಯ ಖ್ಯಾತ ಧಾರಾವಾಹಿ ನಿರ್ಮಾಪಕಿ  ಏಕ್ತಾ ಕಪೂರ್ ಹೇಳಿದ್ದಾರೆ. 

ಸದಾ ಮೂಢನಂಬಿಕೆ ಬಗ್ಗೆ ತೋರಿಸುವ ಏಕ್ತಾ ಕಪೂರ್ ನಿರ್ಮಾಣದ ‘ಅಪಹರಣ್ ’ವೆಬ್ ಸೀರೀಸ್ ಬಗ್ಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಈ ಹೇಳಿಕೆ ನೀಡಲಿದ್ದಾರೆ. 

ವಿಶ್ವದಲ್ಲಿ ಯಾವುದೇ ವಿಚಾರ ಪ್ರಸಿದ್ಧವಾಗುತ್ತಲೇ ಟೀಕೆಗಳೂ ಬರುತ್ತದೆ ಎಂದು ಹೇಳಿದ್ದಾರೆ. 

ಏಕ್ತಾ ನಿರ್ಮಾಣದ ಧಾರಾವಾಹಿಗಳಲ್ಲಿ ಮೂಢನಂಬಿಕೆ ಹಾಗೂ ಲೈಂಗಿಕತೆ ಬಗ್ಗೆ ಸಾಕಷ್ಟು ಪ್ರಚಾರ ನೀಡುವುದರಿಂದ ಸದಾ ಟೀಕೆಗೆ ಗುರಿಯಾಗುತ್ತಲೇ ಇರುವ ಅವರು ತಾವು ತೋರಿಸವ ದೃಶ್ಯಗಳ ಬಗ್ಗೆ ಸಮರ್ಥಿಸಿಕೊಂಡಿದ್ದಾರೆ. 

ಲೈಂಗಿಕ ದೃಶ್ಯಗಳನ್ನು ತೋರಿಸುವುದರಲ್ಲಿ ಯಾವುದೇ ರೀತಿ ಸಮಸ್ಯೆ ಇಲ್ಲ. ಆದರೆ ಸಮಸ್ಯೆ ಇರುವುದು ಜನರ ಮನಸ್ಸಿನಲ್ಲಿ. ಲೈಂಗಿಕ ವಿಚಾರಗಳು ಜನರ ನಡುವೆ ಮುಕ್ತವಾಗಿ ಚರ್ಚೆ ನಡೆಯುವಂತೆ ಆಗಬೇಕು ಎನ್ನುವುದು ತನ್ನ ಅಭಿಪ್ರಾಯ ಎಂದು ಹೇಳಿದ್ದಾರೆ.  

ಒಮ್ಮತವಿಲ್ಲದ ಲೈಂಗಿಕತೆ ಹಾಗೂ ಲೈಂಗಿಕ ಅಪರಾಧಗಳನ್ನು ಮಾತ್ರವೇ ತಪ್ಪೆಂದು ತಾವು ಪರಿಗಣಿಸಬೇಕಾಗುತ್ತದೆ. ದೃಶ್ಯಗಳನ್ನು ತೋರಿಸುವುದು ಯಾವುದೇ ಅಪರಾಧವಲ್ಲ ಎಂದು ಏಕ್ತಾ ಹೇಳಿದ್ದಾರೆ. 

ಇದೇ ವೇಳೆ ‘ನಾಗಿನ್’ ಬಗ್ಗೆಯೂ ಮಾತನಾಡಿದ ಅವರು ತಾವು ಹ್ಯಾರಿ ಪಾಟರ್, ಗೇಮ್ ಆಫ್ ಥ್ರೋನ್ ನಂತಹ ಸೀರೀಸ್ ಗಳನ್ನು ನೋಡಿಕೊಂಡು ಬೆಳೆದಿದ್ದು, ಅಂತಹ ಸೀರೀಸ್ ಮಾಡುವುದು ಕನಸಾಗಿತ್ತು.  ಅದೇ ರೀತಿ ನಾಗಿನ್  ನಿರ್ಮಾಣದ ಮೂಲಕ ತಮ್ಮ ಆಸೆ ಈಡೇರಿದೆ ಎಂದು ಏಕ್ತಾ ಹೇಳಿದರು.