ಇಲಿಯಾನಾ ಈಗ ಫಿಲಾಸಫಿ ಟೀಚರ್!

I am not celebrity i am simple man says Ileana D'Cruz
Highlights

‘ಮೊದಲಿಗೆ ನಾನು ಸೆಲೆಬ್ರಿಟಿಯಲ್ಲ. ಸಾಮಾನ್ಯ ನಟಿಯಷ್ಟೇ. ಈ ಸ್ಟಾರ್ ಎನ್ನುವ ಪದ ನಮ್ಮನ್ನು ಸಾಕಷ್ಟು ಮೇಲೆ ಕೂರಿಸಿಬಿಡುತ್ತದೆ. ಹಾಗಾಗಿ ನಾವು ಜನಸಾಮಾನ್ಯರಿಗಿಂತ ಭಿನ್ನ ಎನ್ನುವ ಭಾವ ಹುಟ್ಟುತ್ತದೆ. ಆದರೆ ಇದನ್ನು ಕಾಪಾಡಿಕೊಳ್ಳುವುದು ಸವಾಲಿನ ಕೆಲಸ. ಈ ಸವಾಲನ್ನು ನಿರ್ವಹಿಸುವ ಭರದಲ್ಲಿ ನಾವು ಸಾಕಷ್ಟು ಸ್ವಂತ ಜೀವನವನ್ನು ಕಳೆದುಕೊಳ್ಳುತ್ತೇವೆ’. - ಹೀಗಂತ ಹೇಳಿರುವ ನಟಿ ಯಾರು ಗೊತ್ತಾ? 

‘ಮೊದಲಿಗೆ ನಾನು ಸೆಲೆಬ್ರಿಟಿಯಲ್ಲ. ಸಾಮಾನ್ಯ ನಟಿಯಷ್ಟೇ. ಈ ಸ್ಟಾರ್ ಎನ್ನುವ ಪದ ನಮ್ಮನ್ನು ಸಾಕಷ್ಟು ಮೇಲೆ ಕೂರಿಸಿಬಿಡುತ್ತದೆ. ಹಾಗಾಗಿ ನಾವು ಜನಸಾಮಾನ್ಯರಿಗಿಂತ ಭಿನ್ನ ಎನ್ನುವ ಭಾವ ಹುಟ್ಟುತ್ತದೆ. ಆದರೆ ಇದನ್ನು ಕಾಪಾಡಿಕೊಳ್ಳುವುದು ಸವಾಲಿನ ಕೆಲಸ. ಈ ಸವಾಲನ್ನು ನಿರ್ವಹಿಸುವ ಭರದಲ್ಲಿ ನಾವು ಸಾಕಷ್ಟು ಸ್ವಂತ ಜೀವನವನ್ನು ಕಳೆದುಕೊಳ್ಳುತ್ತೇವೆ’. - ಹೀಗಂತ ಹೇಳಿರುವುದು ಇಲಿಯಾನ ಡಿಕ್ರೂಸ್.

ಅರೆ! ಎಲ್ಲವೂ ಚೆಂದವಾಗಿಯೇ ಇರುವಾಗ ಇಲಿಯಾನಗೆ ಯಾಕಿಂತ ವೈರಾಗ್ಯ ಬಂತು ಎಂದು ಚಿಂತಿಸಬೇಕಿಲ್ಲ. ಬಾಲಿವುಡ್‌ನಲ್ಲಿ ಒಂದಷ್ಟು ಅನುಭವ ಗಳಿಸಿದ ಮೇಲೆ ಇಲಿಯಾನ ಬದಲಾಗಿದ್ದಾರೆ. ಅವರೇ ಹೇಳುವಂತೆ ‘ಹಿಂದೆ ನನ್ನ ಯಾವುದಾದರೂ ಫೋಟೋಗೆ ಮೆಚ್ಚುಗೆ ಸಿಕ್ಕರೆ ತುಂಬಾ ಸಂತೋಷವಾಗುತ್ತಿತ್ತು. ಖುಷಿಯಲ್ಲಿ ಹಿಗ್ಗಿ ಹೋಗುತ್ತಿದ್ದೆ. ಅದೇ ರೀತಿ ಮತ್ತೊಂದು ಫೋಟೋಗೆ ಕೆಟ್ಟ ಪ್ರತಿಕ್ರಿಯೆ ಸಿಕ್ಕರೆ ಅಷ್ಟೇ ನೋವಾಗುತ್ತಿತ್ತು. ಇದು ಎಲ್ಲರ ಪಾಲಿಗೂ ಸಹಜ ಎನ್ನಿಸುತ್ತದೆ. ಆದರೆ ಒಂದು ಹಂತದಲ್ಲಿ ನಾನು ಇದನ್ನು ದಾಟಿ ಬಂದೆ. ಹಾಗಾಗಿ ಇಂದು ಏನೇ ಕೆಟ್ಟ ಪ್ರತಿಕ್ರಿಯೆ ಬಂದರೂ ಸುಲಭವಾಗಿ ಸ್ವೀಕರಿಸುತ್ತೇನೆ.

ನಟಿಯಾಗಿ ಇನ್ನಷ್ಟು ಕ್ರಿಯೇಟಿವ್  ಆಗಬೇಕು ಎಂದುಕೊಳ್ಳುತ್ತೇನೆ. ಈ ಫೀಲ್ ನನ್ನ ಸೌಂದರ್ಯವನ್ನು ಹೆಚ್ಚಿಸುತ್ತದೆ’ ಹೀಗೆ ಹೇಳಿಕೊಳ್ಳುವ ಮೂಲಕ ಸ್ಟಾರ್‌ಗಿರಿಗಿಂತ ಬಂದದ್ದೆಲ್ಲವನ್ನೂ ಒಪ್ಪಿಕೊಂಡು ಒಳ್ಳೆಯ ನಟಿಯಾಗಿ ಮುಂದೆ ಸಾಗುತ್ತೇನೆ ಎಂದು ಹೇಳಿ ಇತರರಿಗೆ ರೋಲ್ ಮಾಡೆಲ್ ಆಗಿದ್ದಾರೆ. 

loader