ನನ್ನ ತಾಯಿ ಕಷ್ಟ ನೋಡಿದ್ದಾಳೆ. ಪ್ರತಿಯೊಬ್ಬ ಗಂಡಸಿನೊಳಗೂ ತಾಯಿತನ ಇರಬೇಕು.ಇದು ಬಸವಣ್ಣನವರ ಕಾಲದಿಂದಲೂ ಬೆಳಯಬೇಕಿತ್ತು. ಆದರೆ ನಾವು ಹಿಂದೆ ಬಂದಿದ್ದೇವೆ.

ಬೆಳಗಾವಿ(ಡಿ.06): ಈ ದೇಶದಲ್ಲಿ ನನಗೆ ಯಾವುದೇ ಜಾತಿ, ಧರ್ಮವಿಲ್ಲ. ನನ್ನ ತಾಯಿ ಅನಾಥೆ. ಗದುಗಿನಲ್ಲಿ ಹುಟ್ಟಿ ಬೆಳಗಾವಿಯಲ್ಲಿ ಬೆಳೆದು ಬೆಂಗಳೂರಿಗೆ ಬಂದಳು' ಎಂದು ನಟ ಪ್ರಕಾಶ್ ರೈ ತಮ್ಮ ಹಿನ್ನಲೆಯ ಬಗ್ಗೆ ಒಂದಿಷ್ಟು ವಿವರಿಸಿದರು.

ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ತಾಯಿ ಕಷ್ಟ ನೋಡಿದ್ದಾಳೆ. ಪ್ರತಿಯೊಬ್ಬ ಗಂಡಸಿನೊಳಗೂ ತಾಯಿತನ ಇರಬೇಕು.ಇದು ಬಸವಣ್ಣನವರ ಕಾಲದಿಂದಲೂ ಬೆಳಯಬೇಕಿತ್ತು. ಆದರೆ ನಾವು ಹಿಂದೆ ಬಂದಿದ್ದೇವೆ. ನಮ್ಮಲ್ಲರ ಮುಗ್ಧತೆಯಲ್ಲಿ ಮೌಡ್ಯ ಬೆಳೆಯುತ್ತದೆ. ಹೊಸ ಮೂಢನಂಬಿಕೆಯನ್ನು ದೇಶದಲ್ಲಿ ತರುತ್ತಿದ್ದಾರೆ. ನನ್ನನ್ನು ಕೆಲವರು ಹಿಂದುತ್ವದ ಮೇಲೆ ಹೆದರಿಸುತ್ತಿದ್ದಾರೆ. ಆದರೆ ನಾನು ಇದಕ್ಕೆಲ್ಲ ಅಂಜುವುದಿಲ್ಲ. ಕಳ್ಳರು, ಪುಕ್ಕಲರು, ಹೇಡಿಗಳು ಮಾತ್ರ ಹೆದರಿಸುತ್ತಿದ್ದಾರೆ. ನನ್ನ ವ್ಯಂಗ್ಯ, ಆತಂಕದ ಹಿಂದೆ ದೊಡ್ಡ ನೋವಿದೆ. ಇದಕ್ಕೆ ನಾವು ಭಯಪಡುವುದು ಬೇಡ'ಎಂದು ತಿಳಿಸಿದರು.