ಜೈಪುರದ ಬೀದಿ ಬೀದಿಗಳಲ್ಲಿ ಸೈಕಲ್’ನಲ್ಲಿ ಹಪ್ಪಳ ಮಾರುತ್ತಿದ್ದಾರೆ ಹೃತಿಕ್ ರೋಶನ್

First Published 21, Feb 2018, 2:05 PM IST
Hrithik Roshan Sells papad on Jaipur streets
Highlights

ಬಾಲಿವುಡ್ ಸುರಸುಂದರಾಂಗ ಎಂದೇ ಪ್ರಖ್ಯಾತವಾಗಿರುವ ಹೃತಿಕ್ ರೋಶನ್ ಇದೀಗ ಜೈಪುರದ ಬೀದಿಗಳಲ್ಲಿ ಹಪ್ಪಳ ಮಾರುತ್ತಿದ್ದಾರೆ

ಜೈಪುರ್ : ಬಾಲಿವುಡ್ ಸುರಸುಂದರಾಂಗ ಎಂದೇ ಪ್ರಖ್ಯಾತವಾಗಿರುವ ಹೃತಿಕ್ ರೋಶನ್ ಇದೀಗ ಜೈಪುರದ ಬೀದಿಗಳಲ್ಲಿ ಹಪ್ಪಳ ಮಾರುತ್ತಿದ್ದಾರೆ

ಅವರ ತಲೆ ಕೆದರಿದ್ದು, ಸೈಕಲ್ ಮೇಲೆ ಹಪ್ಪಳವನ್ನು ಇರಿಸಿಕೊಂಡು ಅಲ್ಲಿನ ಬೀದಿ ಬೀದಿ ಅಲೆಯುತ್ತಿದ್ದಾರೆ. ಅರೆ..! ಕೋಟಿ ಕೋಟಿ ಒಡೆಯನಿಗೆ ಇಂತಹ ದುರ್ಗತಿ ಏನಾಯ್ತು ಅಂದುಕೊಂಡರೆ ಅದು ತಪ್ಪು.

ಅವರ ಮುಂದಿನ ಚಿತ್ರ ಗಣಿತಜ್ಞ ಆನಂದ್ ಕುಮಾರ್ ಅವರ ಜೀವನವನ್ನು ಆಧರಿಸಿ ನಿರ್ಮಾಣವಾಗುತ್ತಿರುವ ಸೂಪರ್ 30 ಚಿತ್ರದ ಶೂಟಿಂಗ್’ಗಾಗಿ ಈ ರೀತಿ ಕಾಣಿಸಿಕೊಂಡಿದ್ದಾರೆ. ಅಲ್ಲದೇ ಈ ರೀತಿಯಾದ ವೇಷದಲ್ಲಿದ್ದಾಗ ಹೃತಿಕ್’ರನ್ನೂ ಯಾರೂ ಕೂಡ ಗುರುತು ಹಿಡಿಯಲಿಲ್ಲವಂತೆ.  

 

loader