ಬಾಲಿವುಡ್ ನಟ ಹೃತಿಕ್ ರೋಷನ್ ತಾತ, ಬಾಲಿವುಡ್ ನ ಖ್ಯಾತ ನಿರ್ಮಾಪಕ ಜೆ ಓಂ ಪ್ರಕಾಶ್ ಇಂದು ವಿಧಿವಶರಾಗಿದ್ದಾರೆ. 

ಓಂ ಪ್ರಕಾಶ್ ಗೆ 93 ವರ್ಷ ವಯಸ್ಸಾಗಿತ್ತು. ರಾಜೇಶ್ ಖನ್ನಾ ಹಿಟ್ ಸಿನಿಮಾಗಳಾದ ಆಪ್ ಕಿ ಕಸಮ್, ಆಖಿರ್ ಕ್ಯೂ, ಜೀತೇಂದ್ರ ನಟನೆಯ ಅರ್ಪಣ್, ಆದಮಿ ಖಿಲೋನಾ ಹೈ ಚಿತ್ರಕ್ಕೆ ನಿರ್ದೇಶನ ಮಾಡಿದ ಕೀರ್ತಿ ಇವರದ್ದು. 

1947 ರಂದು ತೆರೆಕಂಡ ರಾಜೇಶ್ ಖನ್ನಾ ಆಪ್ ಕಿ ಕಸಮ್ ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಕಾಲಿಟ್ಟರು. ಈ ಚಿತ್ರ ಸೂಪರ್ ಹಿಟ್ ಆಯಿತು.  ಅದೇ ರೀತಿ ಜೀತೇಂದ್ರ ಅವರ ಅಪನಾ ಬನಾ ಲೋ, ಅಪ್ನಾಪನ್, ಆಶಾ, ಆದ್ಮಿ ಖಿಲೋನಾ ಹೈ’ ನಂತಹ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. 

 

ಓಂ ಪ್ರಕಾಶ್ ಪುತ್ರಿ ಪಿಂಕಿ ನಿರ್ದೇಶಕ, ನಿರ್ಮಾಪಕ ರಾಕೇಶ್ ರೋಹನ್ ರನ್ನು ಮದುವೆಯಾಗುತ್ತಾರೆ. ಅಂದರೆ ಹೃತಿಕ್ ತಂದೆಯನ್ನು. ಹೃತಿಕೆ ಇತ್ತೀಚಿಗೆ ತಾತನಿಗೆ ಕಾರೊಂದನ್ನು ಗಿಫ್ಟ್ ಆಗಿ ಕೊಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದು.