ದಿ ವಿಲನ್​ ಹೆಸರೇ ಹೇಳುವಂತೆ ರಾಮ ರಾವಣ ಕಲ್ಪನೆಯ ಈ ಸಿನಿಮಾ ಮೊದಲ ನೋಟದಲ್ಲೇ  ಸಿನಿ ರಸಿಕರೆದೆಯಲ್ಲಿ  ಭರ್ಜರಿ ಬೆಂಕಿಕಿಡಿಯನ್ನು  ಹೊತ್ತಿಸಿದೆ. 

ಬೆಂಗಳೂರು (ಅ.23): ದಿ ವಿಲನ್​ ಹೆಸರೇ ಹೇಳುವಂತೆ ರಾಮ ರಾವಣ ಕಲ್ಪನೆಯ ಈ ಸಿನಿಮಾ ಮೊದಲ ನೋಟದಲ್ಲೇ ಸಿನಿ ರಸಿಕರೆದೆಯಲ್ಲಿ ಭರ್ಜರಿ ಬೆಂಕಿಕಿಡಿಯನ್ನು ಹೊತ್ತಿಸಿದೆ. 

ಸ್ಯಾಂಡಲ್​ವುಡ್​ನ ಇಬ್ಬರು ದಿಗ್ಗಜ ನಟರ ಈ ಸಿನಿಮಾ ಹೇಗಿರುತ್ತೊ ಅನ್ನೋ ಕುತೂಹಲ ಈಗಿನಿಂದಲೇ ಶುರುವಾಗಿದೆ. ಈ ನಡುವೆ ಆಗಾಗ ನಿರ್ದೇಶಕ ಪ್ರೇಮ್ ಸಿನಿಮಾದ ಬಗ್ಗೆ ಒಂದೊಂದು ಬ್ರೇಕಿಂಗ್ ನ್ಯೂಸ್​ ಕೊಟ್ಟು ಅಭಿಮಾನಿಗಳಿಗೆ ಇನ್ನಷ್ಟು ಥ್ರಿಲ್ ನೀಡುತ್ತಿದ್ದಾರೆ.

ದಿ ವಿಲನ್ ಸಿನಿಮಾದ ಟಾಕಿ ಪೋರ್ಷನ್ ಆಲ್​ಮೋಸ್ಟ್ ಮುಕ್ತಾಯ ಹಂತದಲ್ಲಿದೆ. ಇದೀಗ ಜೋಗಿ ಪ್ರೇಮ್ ಕಿಚ್ಚನ ಇಂಟ್ರೊಡಕ್ಷನ್ ಹಾಡಿಗೆ ಸ್ಕೆಚ್ ಹಾಕಿದ್ದಾರೆ. ಸಿನಿಮ ಶೂಟಿಂಗ್​ನ್ನು ಯಾವಾಗಲೂ ಹಬ್ಬದಂದೆ ಸೆಲೆಬ್ರೇಟ್​ ಮಾಡುವ ಪ್ರೇಮ್ ಸುದೀಪ್ ಇಂಟ್ರೊಡಕ್ಷನ್ ಹಾಡನ್ನು ಭಾರೀ ವಿಶೇಷವಾಗಿ ಪ್ಲ್ಯಾನ್​ ಮಾಡಿದ್ದಾರೆ. ನಿರ್ಮಾಪಕ ಸಿ ಆರ್ ಮನೋಹರ್ ಈ ಹಾಡಿಗೆ 2 ಕೋಟಿ ಖರ್ಚು ಮಾಡಲು ಜೈ ಅಂದಿದ್ದಾರೆ. ಅರ್ಜುನ್ ಜನ್ಯ ಮಸ್ತ್ ಹಾಡಿಗೆ ನಾಗೇಶ್ ಮಾಸ್ಟರ್​ ಕೊರಿಯಾಗ್ರಫಿ ಮಾಡುತ್ತಿದ್ದು, 100ಜನ ಫಾರಿನ್ ಡಾನ್ಸರ್ಸ್​ ಈ ಹಾಡಿನಲ್ಲಿರುತ್ತಾರೆ. ಸೆಟ್​ ಸಾಂಗ್​ ಇದಾಗಿದ್ದು ಕಿಚ್ಚನ ಲುಕ್ಕು ಗೆಟಪ್ಪು ಮತ್ತು ಕ್ಯಾರೆಕ್ಟರ್ ರೀವಿಲ್ ಈ ಹಾಡಿನಲ್ಲಾಗುತ್ತೆ. ಇನ್ನು ಶಿವರಾಜ್​ಕುಮಾರ್​ಗೂ ಸಿನಿಮಾದಲ್ಲಿ ವಿಭಿನ್ನ ಇಂಟ್ರೊಡಕ್ಷನ್ ಸಾಂಗ್ ಇರಲಿದೆ. ಅದನ್ನು ತುಂಬಾ ರಾ ಆಗಿ ಚಿತ್ರೀಕರಿಸಲಿದ್ದಾರೆ ಪ್ರೆಮ್. ಇಬ್ಬರ ನಡುವೆ ಸುಂದರಿ ಆಮಿ ಜಾಕ್ಸನ್ ಗ್ಲ್ಯಾಮರ್ ಟಚ್ ನೀಡಲಿದ್ದಾರೆ.