ರಣವೀರ್ ಸಿಂಗ್ ಮೆಚ್ಚಿದ ದೀಪಿಕಾ

First Published 5, Feb 2018, 6:17 PM IST
Here is another proof on the relationship of Deepika Padukone and Ranveer Singh
Highlights

'ಪದ್ಮಾವತ್' ಚಿತ್ರ ತೆರೆಗೆ ಬರುವ ವೇಳೆಯಿಂದಲೂ ಸಖತ್ ಸುದ್ದಿಯಲ್ಲಿದ್ದ ದೀಪಿಕಾ ಈಗ ವಿವಾದಗಳ ಆಚೆ ಬಂದು ರೊಮ್ಯಾಂಟಿಕ್ ಮೂಡ್‌ಗೆ ಇಳಿದಿದ್ದಾರೆ ಎನ್ನಿಸುತ್ತದೆ. ಇದಕ್ಕೆ ಕಾರಣ ಅವರು ಸಂದರ್ಶನವೊಂದರಲ್ಲಿ ರಣವೀರ್ ಸಿಂಗ್ ಬಗ್ಗೆ ಮೆಚ್ಚುಗೆಯ ಮಾತನ್ನಾಡಿರುವುದು.

'ನಾವಿಬ್ಬರೂ ಸಾಕಷ್ಟು ವಿಚಾರಗಳಲ್ಲಿ ಸಾಮ್ಯತೆ ಹೊಂದಿದ್ದೇವೆ. ಅವನನ್ನು ಬಹಳ ವರ್ಷಗಳಿಂದ ನಾನು ನೋಡುತ್ತಲೇ ಬಂದಿದ್ದೇನೆ. ಮೊದಲಿನಿಂದಲೂ ಎಲ್ಲಾ ರೀತಿಯ ಪಾತ್ರಗಳಿಗೂ ಅವನು ಜೀವ ತುಂಬುವ ರೀತಿ ನನಗೆ ತುಂಬಾ ಇಷ್ಟ. 'ಪದ್ಮಾವತ್' ಚಿತ್ರದಲ್ಲಿ ಅವನದು ದೊಡ್ಡ ಕೊಡುಗೆ ಇದೆ.' ಎಂದು ಕೊಂಡಾಡಿದ್ದಾಳೆ.

ಈಗಾಗಲೇ ದೀಪಿಕಾಗೂ ರಣವೀರ್‌ಗೂ ಲವ್ವಾಗಿದೆ ಎನ್ನುವ ಸುದ್ದಿಗೆ ರೆಕ್ಕೆ ಪುಕ್ಕ ಬಂದಂತಾಗಿದೆ. ಅದೂ ಕೂಡ ದೊಡ್ಡ ನಿರೀಕ್ಷೆಯ ಚಿತ್ರ ತೆರೆಗೆ ಬಂದು ಯಶಸ್ವಿ ಪ್ರದರ್ಶನ ಕಾಣುತ್ತಿರುವ ಹೊತ್ತಿನಲ್ಲಿ ದೀಪಿಕಾ ರಣವೀರ್ ಬಗ್ಗೆ ಆಡಿರುವ ಮಾತುಗಳು ಈಗ ಅಭಿಮಾನಿಗಳು ಬೇರೆಯದೇ ರೀತಿಯ ಅಂದಾಜು ಮಾಡಿಕೊಳ್ಳಲು ಪ್ರೇರಣೆ ನೀಡಿವೆ.

ಇಬ್ಬರೂ ಮದುವೆಯಾಗಲು ರೆಡಿ ಎನ್ನುವ ಸುದ್ದಿ ದಿಢೀರ್ ಎಂದು ಬಂದೆರಗಿದರೂ ಅಚ್ಚರಿ ಇಲ್ಲ ಎನ್ನುವುದು ಆಪ್ತ ಮೂಲಗಳ ಅಭಿಪ್ರಾಯ. 

loader