. ಅಲ್ಲದೆ, ತಿಂಗಳಿಗೆ 65 ಸಾವಿರ ಜೀವನಾಂಶ ನೀಡಬೇಕು ಅಂತ ಆದೇಶಕ್ಕೂ ಹೈಕೋರ್ಟ್ ಪೀಠ ತಡೆ ಕೊಟ್ಟಿದೆ.
ಚೆನ್ನೈ(ಮಾ.02): ತಮಿಳು ಚಿತ್ರನಟ ಧನುಷ್ ಜನ್ಮರಹಸ್ಯದ ಅರ್ಜಿ ವಿಚಾರವಾಗಿ DNA ಪರೀಕ್ಷೆ ಅರ್ಜಿ ವಿಚಾರಣೆ ಮಾರ್ಚ್ 9ಕ್ಕೆ ಮುಂದೂಡಿಕೆ ಆಗಿದೆ. ಈ ಸಂಬಂಧ ಇವತ್ತು ವಿಚಾರಣೆ ಕೈಗೆತ್ತಿಕೊಂಡ ಮದ್ರಾಸ್ ಹೈಕೋರ್ಟ್ನ ಮಧುರೈ ಪೀಠ, ಮ್ಯಾಜಿಸ್ಟ್ರೇಟ್ ನ್ಯಾಯಾಲಯ ನೀಡಿದ್ದ ಜೀವನಾಂಶ ಆದೇಶಕ್ಕೂ ತಡೆ ನೀಡಿತು. ಅಲ್ಲದೆ, ತಿಂಗಳಿಗೆ 65 ಸಾವಿರ ಜೀವನಾಂಶ ನೀಡಬೇಕು ಅಂತ ಆದೇಶಕ್ಕೂ ಹೈಕೋರ್ಟ್ ಪೀಠ ತಡೆ ಕೊಟ್ಟಿದೆ. ಇಂದು ವಿಚಾರಣೆ ಆರಂಭವಾಗುತ್ತಿದ್ದಂತೆ ಪಿತೃತ್ವ ಸಾಬೀತು ಕೋರಿರುವ ಅರ್ಜಿ ವಜಾಗೊಳಿಸುವಂತೆ ಧನುಷ್ ಪರ ವಕೀಲರು ಮನವಿ ಮಾಡಿದರು. ಈ ವೇಳೆ ಧನುಷ್ ಅರ್ಜಿಯ ಅಂತಿಮ ವಿಚಾರಣೆ ವೇಳೆ ಡಿಎನ್ಎ ಅರ್ಜಿ ಪರಿಶೀಲಿಸಲಾಗುವುದು ಅಂತ ಕೋರ್ಟ್ ಹೇಳಿ ವಿಚಾರಣೆ ಮುಂದೂಡಿತು.
