ತಾವು ಪ್ರೌಡರೆಂದು ಸುಳ್ಳು ಹೇಳಿ ಬಂದೂಕು ಪರವಾನಗಿ ಪಡೆದುಕೊಂಡಿದ್ದರು.
ಚಂಡಿಘಡ(ಏ.30): ಬಾಲಿವುಡ್ ನಟಿ ಸೋಹಾ ಅಲಿ ಖಾನ್ ಬಂದೂಕು ಪರವಾನಗಿ ಪಡೆದುಕೊಳ್ಳಲು ತನ್ನ ವಯಸ್ಸನ್ನು ಮರೆ ಮಾಚಿದ್ದು, ಈ ಬಗ್ಗೆ ಹರ್ಯಾಣ ಲೋಕಾಯುಕ್ತ ನ್ಯಾಯಾಲಯ ತನಿಖೆ ನಡೆಸುವಂತೆ ಗುರ್ಗಾಂವ್ ಪೊಲೀಸ್ ಆಯುಕ್ತರು ಹಾಗೂ ಜಿಲ್ಲಾ ಬಂದೂಕು ಪರವಾನಗಿ ಪ್ರಾಧಿಕಾರಕ್ಕೆ ನಿರ್ದೇಶನ ನೀಡಿದೆ.
ಜುಲೈ 24ರೊಳಗಾಗಿ ಈ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಲೋಕಾಯುಕ್ತಾ ನ್ಯಾಯಾಧೀಶರಾದ ಎನ್.ಕೆ. ಅಗರ್'ವಾಲ್ ಆದೇಶಿಸಿದ್ದಾರೆ. ಸೋಹಾ ಅಲಿ ಖಾನ್ ತನ್ನ ವಯಸ್ಸನ್ನು ಸುಳ್ಳು ಹೇಳಿ ಬಂದೂಕು ಪರವಾನಗಿ ಪಡೆದುಕೊಂಡಿದ್ದಾರೆ ಎಂದು ಪ್ರಾಣಿಗಳ ಹಕ್ಕುಗಳ ಹೋರಾಟಗಾರ ಹಾಗೂ ಹರ್ಯಾಣ ಸ್ಕೌಟ್ಸ್ ಮತ್ತು ಗೈಡ್ಸ್'ನ ಆಯುಕ್ತರಾದ ನರೇಶ್ ಕುಮಾರ್ ಕದಿಯನ್ ಕಳೆದ ವರ್ಷ ದೂರು ನೀಡಿದ್ದರು.
ಸೋಹಾ ಅಲಿ ಖಾನ್ 1996 ನವೆಂಬರ್'ನಲ್ಲಿ ಅಪ್ರಾಪ್ತರಾಗಿದ್ದ ಸೋಹಾ ಅಲಿ ಖಾನ್ ತಾವು ಪ್ರೌಡರೆಂದು ಸುಳ್ಳು ಹೇಳಿ ಬಂದೂಕು ಪರವಾನಗಿ ಪಡೆದುಕೊಂಡಿದ್ದರು. ಅಲ್ಲದೆಆಕೆಯವಿರುದ್ಧಕೃಷ್ಣಮೃಗಕೊಂದಆರೋಪಕೂಡಇದೆ. ಪರವಾನಗಿ ಪಡೆದ ಶಸ್ತ್ರದಿಂದಲೇ ಪ್ರಾಣಿಯನ್ನು ಹತ್ಯೆ ಮಾಡಿದ್ದಾರೆ ಎಂದು ಪ್ರಕರಣ ದಾಖಲಾಗಿದೆ.
