ಇವರ ಸಂಗೀತ ಸಂಯೋಜನೆಯ ಮೊದಲ ಚಿತ್ರ ರೂಪುಗೊಂಡಿದ್ದು ಕನ್ನಡದಲ್ಲೇ. ದ್ವಾರಕೀಶ್ ನಿರ್ಮಾಣದ ವಿನೋದ್ ರಾಜ್ ಅಭಿನಯದ ಡ್ಯಾನ್ಸ್ ರಾಜಾ ಡ್ಯಾನ್ಸ್ ಚಿತ್ರಕ್ಕೆ ಕೀ ಬೋರ್ಡ್ ನುಡಿಸಿದ್ದು ಇದೇ ರೆಹಮಾನ್.
ಭಾರತೀಯ ಸಿನಿಮಾ ರಂಗದ ಸಂಗೀತವನ್ನು ವಿಶ್ವಮಟ್ಟದಲ್ಲಿ ಖ್ಯಾತಿಗೊಳಿಸಿದ ಆಸ್ಕರ್ ಪ್ರಶಸ್ತಿ ವಿಜೇತ ಹಾಗೂ ಸಂಗೀತ ಮಾಂತ್ರಿಕ ಎ.ಆರ್.ರೆಹಮಾನ್ ಅವರಿಗೆ 50ನೇ ಹುಟ್ಟುಹಬ್ಬದ ನಮನಗಳು.
ಚೆನ್ನೈ'ನಲ್ಲಿ 1967, ಜನವರಿ 6ರಂದು ಜನಿಸಿದ ಅವರಿಗೆ ಸಂಗೀತ ತಂದೆಯಿಂದಲೇ ಬಳುವಳಿಯಾಗಿ ಬಂದಿತ್ತು. ತಂದೆ ಆರ್.ಕೆ.ಶೇಖರ್ ಆ ಕಾಲದಲ್ಲಿಯೇ ತಮಿಳು ಹಾಗೂ ಮಲಯಾಳಿ ಸಿನಿಮಾಗಳಿಗೆ ಸಂಗೀತ ನೀಡಿದ್ದರು.


ಶೇಖರ್ ಅವರ ಅಕಾಲಿಕ ಮರಣದಿಂದ ಸಣ್ಣ ವಯಸ್ಸಿನಲ್ಲಿಯೇ ತಾಯಿಯ ಆಶ್ರಯದಲ್ಲಿ ಬೆಳೆಯುವುದರ ಜೊತೆ ಕುಟುಂಬದ ಜವಾಬ್ದಾರಿ ಕೂಡ ರೆಹಮಾನ್ ಅವರ ಮೇಲೆ ಬಿತ್ತು.

ಎಲ್ಲರಿಗೂ ತಿಳಿದಿರುವಂತೆ ರೆಹಮಾನ್ ಮೂಲ ಹೆಸರು ಎ.ಎಸ್. ದಿಲೀಪ್ ಕುಮಾರ್. ಕೌಟುಂಬಿಕ ಕಾರಣಕ್ಕಾಗಿ ಇಸ್ಲಾಂ'ಗೆ ಮತಾಂತರಗೊಂಡರು.

ಕುಟುಂಬದ ಸಂಪೂರ್ಣ ಜವಾಬ್ದಾರಿ ತಮ್ಮ ಮೇಲೆ ಬಿದ್ದ ಕಾರಣ ಆರ್ಕೆಸ್ಟ್ರಾ'ಗಳಲ್ಲಿ ಕೀ ಬೋರ್ಡ್ ವಾದಕ ಸಂಯೋಜಕನಾಗಿ ಹಾಗೂ ಜಾಹಿರಾತುಗಳಿಗೆ ಸಂಗೀತ ನೀಡುವ ಮೂಲಕ ತಮ್ಮ ಸಂಗೀತ ವೃತ್ತಿಯನ್ನು ಆರಂಭಿಸಿದರು

ಡ್ಯಾನ್ಸ್ ರಾಜಾ ಡ್ಯಾನ್ಸ್'ಗೆ ಕೀಬೋರ್ಡ್ ಸಂಯೋಜಕ
ಇವರ ಸಂಗೀತ ಸಂಯೋಜನೆಯ ಮೊದಲ ಚಿತ್ರ ರೂಪುಗೊಂಡಿದ್ದು ಕನ್ನಡದಲ್ಲೇ. ದ್ವಾರಕೀಶ್ ನಿರ್ಮಾಣದ ವಿನೋದ್ ರಾಜ್ ಅಭಿನಯದ ಡ್ಯಾನ್ಸ್ ರಾಜಾ ಡ್ಯಾನ್ಸ್ ಚಿತ್ರಕ್ಕೆ ಕೀ ಬೋರ್ಡ್ ನುಡಿಸಿದ್ದು ಇದೇ ರೆಹಮಾನ್.

ನಂತರ ಬೆಂಗಳೂರಿನಿಂದ ಪುನಃ ಚೆನ್ನೈ'ಗೆ ಪ್ರಯಾಣ ಬೆಳಸಿದ ರೆಹಮಾನ್ ಪ್ರಪ್ರಥಮವಾಗಿ ಸಂಗೀತ ಸಂಯೋಜಿಸಲು ಅವಕಾಶ ಭಾರತೀಯ ಚಿತ್ರರಂಗದ ಖ್ಯಾತ ನಿರ್ದೇಶಕ ಮಣಿರತ್ನಂ.
ಮಣಿರತ್ನಂ ಅವರ 'ರೋಜಾ' ಚಿತ್ರದಲ್ಲಿ ಸ್ವತಂತ್ರವಾಗಿ ಸಂಗೀತ ನಿರ್ದೇಶಕರಾದ ರೆಹಮಾನ್ ಪುನಃ ಹಿಂತಿರುಗಿ ನೋಡಲಿಲ್ಲ. ಮೊದಲ ಚಿತ್ರಕ್ಕೆ ಅತ್ಯುತ್ತಮ ಸಂಗೀತ ನೀಡಿದ್ದಕ್ಕಾಗಿ ರಾಷ್ಟ್ರಪ್ರಶಸ್ತಿ ಪಡೆದರು. ಅನಂತರ ಅವರು ನೀಡಿದ್ದೆಲ್ಲ ಚಿತ್ರಗಳೆಲ್ಲವೂ ಹಿಟ್ ಆಗ ತೊಡಗಿದವು.

ಬಾಂಬೆ, ಕಾದಲನ್, ಡುಯೆಟ್, ರಂಗೀಲಾ, ದಿಲ್ ಸೆ,ಸ್ವದೇಶ್, ಇಂಡಿಯನ್, ಲಗಾನ್, ಜಂಟ್ಲ'ಮೆನ್ ಎಲ್ಲವೂ ಹಿಟ್ ಚಿತ್ರಗಳೆ. ಕೆಲವು ವರ್ಷಗಳ ಹಿಂದೆ ಕನ್ನಡದ ಉಪೇಂದ್ರ ಅಭಿನಯದ ಗಾಡ್ ಫಾದರ್ ಸಿನಿಮಾ'ಗೂ ಸಂಗೀತ ಸಂಯೋಜಿಸಿದ್ದರು.

ಆಸ್ಕರ್ ಪ್ರಶಸ್ತಿ, ರಾಷ್ಟ್ರಪ್ರಶಸ್ತಿ'ಗಳ ಸುರಿಮಳೆ
ರೆಹಮಾನ್ ಅವರು ಅಂತರರಾಷ್ಟ್ರೀಯ, ರಾಷ್ಟ್ರೀಯ ಹಾಗೂ ಪ್ರಾದೇಶಿಕ ಮಟ್ಟದಲ್ಲಿ 131 ಪ್ರಶಸ್ತಿಗಳನ್ನು ಪಡೆದಿದ್ದಾರೆ. ಇದರಲ್ಲಿ ಸ್ಲಂ ಡಾಗ್ ಮಿಲೆನಿಯರ್ ಚಿತ್ರಕ್ಕೆ 2 ಆಸ್ಕರ್, ತಲಾ 2 ಗೋಲ್ಡನ್ ಗ್ಲೋಬ್, ಬೆಫ್ಟಾ, 1 ಗ್ರ್ಯಾಮಿ, 6 ರಾಷ್ಟ್ರ ಪ್ರಶಸ್ತಿಗಳು ಸೇರಿವೆ.

