ಬೆಂಗಳೂರು(ಅ.22); ಹಳ್ಳಿಮೇಷ್ಟು.. ಕನ್ನಡದ ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ ಸೂಪರ್ ಹಿಟ್ ಚಿತ್ರ. ಈ ಚಿತ್ರದಲ್ಲಿ ರವಿಚಂದ್ರನ್ ಜೊತೆಗೆ ಅತ್ಯಂತ ಗಮನ ಸೆಳೆದದ್ದು ನಟಿ ಬಿಂದಿಯಾ ಅಲಿಯಾಸ್ ಫರ್ಹೀನ್. ನಟನೆ, ಡ್ಯಾನ್ಸ್, ಹಳ್ಳಿ ಸೊಡಗಿನ ಡೈಲಾಗ್ ಡೆಲಿವರಿ, ಕಣ್ಣಲ್ಲೇ ರಸಿಕರನ್ನ ಸೆಳೆದ ಈ ಸುಂದರಿ ಒಂದೆರಡು ಚಿತ್ರದಲ್ಲೇ ಜನಪ್ರಿಯರಾಗಿದ್ದರು. ಹಳ್ಳಿಮೇಷ್ಟ್ರು ಚಿತ್ರ ಪರಿಮಳ ಪಾತ್ರ ಜನರನ್ನ ರಂಜಿಸಿದ್ದು ಸುಳ್ಳಲ್ಲ. ಇದಾದ ಬಳಿಕ ರಾಯರು ಬಂದವರು ಮನೆಗೆ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಬಿಂದಿಯಾ ಮತ್ತೆಲ್ಲೂ ಕಾಣಲೇ ಇಲ್ಲ.

ಅಂದಹಾಗೆ, ಈ ಸ್ಫುರದ್ರೂಪಿ ನಟಿ ಎಲ್ಲಿ ಹೋದರೂ ಎಂದು ಹುಡುತ್ತಿದ್ದಾಗ ದೆಹಲಿಯಲ್ಲಿ ನೆಲೆಸಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಮಾಜಿ ಕ್ರಿಕೆಟಿಗ ಮನೋಜ್ ಪ್ರಭಾಕರ್ ಅವರನ್ನ ವಿವಾಹವಾಗಿರುವ ಬಿಂದಿಯಾ ಅಲಿಯಾಸ್ ಫರ್ಹೀನ್ ಸುಖ ಸಂಸಾರ ನಡೆಸುತ್ತಿದ್ದಾರೆ. ದೆಹಲಿಯಲ್ಲಿ ನೆಲೆಸಿರುವ ಬಿಂದಿಯಾಗೆ ಇಬ್ಬರು ಮಕ್ಕಳು ಸಹ ಿದ್ದಾರೆ. ಇತ್ತೀಚೆಗೆ, ನಾನು ಮಾಧುರಿ ದೀಕ್ಷಿತ್`ಗಿಂತಲೂ ಸುಂದರವಾಗಿದ್ದೇನೆ ಎಂದು ಹೇಳಿಕೆ ನೀಡಿ ಸುದ್ದಿಯಾಗಿದ್ದರು.

CLICK HERE.. ಸನ್ಯಾಸಿನಿಯಾದ್ರಾ ಸ್ವಾಭಿಮಾನದ ಸುಂದರಿ ನಟಿ ಮಹಾಲಕ್ಷ್ಮೀ..?