Asianet Suvarna News Asianet Suvarna News

ಮತ್ತೆ ಶುರುವಾಗಲಿದೆ ’ಹಳ್ಳಿ ಹೈದ ಪ್ಯಾಟೆಗೆ ಬಂದ’ ರಿಯಾಲಿಟಿ ಶೋ

ಹಳ್ಳಿ ಹೈದ ಪ್ಯಾಟೆಗ್ ಬಂದ ಸೀಸನ್ 3 ರಿಯಾಲಿಟಿ  ಶೋ ಮತ್ತೆ ಶುರುವಾಗಲಿದೆ. ಈ ಹಿಂದಿನ ಎರಡೂ ಸೀಸನ್‌ಗಳು ಭಾರೀ ಮನ್ನಣೆ ಗಳಿಸಿತ್ತು. ಇದೀಗ ಮತ್ತೆ ಮನರಂಜನೆ ನೀಡಲು ಬರ್ತಾ ಇದೆ ಹಳ್ಳಿ ಹೈ ಪ್ಯಾಟೆಗ್ ಬಂದ ರಿಯಾಲಿಟಿ ಶೋ. 

Halli Haida Pyateg Banda season 3 reality show begins again
Author
Bengaluru, First Published Sep 21, 2018, 5:03 PM IST
  • Facebook
  • Twitter
  • Whatsapp

ಬೆಂಗಳೂರು (ಸೆ. 21): ಹಳ್ಳಿ ಹೈದ ಪ್ಯಾಟೆಗ್ ಬಂದ ಸೀಸನ್ 3 ರಿಯಾಲಿಟಿ  ಶೋ ಮತ್ತೆ ಶುರುವಾಗಲಿದೆ. ಇದೇ 23 ರಿಂದ ಸಂಜೆ 6 ಗಂಟೆಗೆ ಅದ್ದೂರಿ ಕಾರ್ಯಕ್ರಮದ ಮೂಲಕ ಹಳ್ಳಿ ಹೈದರನ್ನು ಬರ ಮಾಡಿಕೊಳ್ಳಲಾಗುವುದು. 

ರಾಜ್ಯದ ಬೇರೆ ಬೇರೆ ಭಾಗದ ಹಳ್ಳಿಗಳಿಂದ ಸ್ಪರ್ಧಾಳುಗಳು ಇದರಲ್ಲಿ ಭಾಗವಹಿಸುತ್ತಿದ್ದಾರೆ. ಒಟ್ಟು 12 ಮಂದಿ ಸ್ಪರ್ಧಾಳುಗಳಿದ್ದಾರೆ.

ನಟಿ ಮಾಲಾಶ್ರೀ, ಹರಿಪ್ರಿಯಾ ಹಾಗೂ ಐಂದ್ರಿತಾ ರೇ ಹಳ್ಳಿ ಹೈದರನ್ನು ಇದೇ ಭಾನುವಾರ  ಸಂಜೆ 6 ಗಂಟೆಗೆ ಬರ ಮಾಡಿಕೊಳ್ಳಲಿದ್ದಾರೆ. 

ಈಗಾಗಲೇ ಪ್ರೋಮೋವನ್ನು ಬಿಡಲಾಗಿದ್ದು ಇದು ಪ್ರೇಕ್ಷಕರ ಗಮನ ಸೆಳೆಯುವಂತಿದೆ. ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿದಿನ ರಾತ್ರಿ 9 ಗಂಟೆಗೆ ಪ್ರಸಾರವಾಗಲಿದೆ. ಎಂದಿನಂತೆ ಅಕುಲ್ ಬಾಲಾಜಿ ನಿರೂಪಣೆ ಮಾಡಲಿದ್ದಾರೆ. 

 

Follow Us:
Download App:
  • android
  • ios