Asianet Suvarna News Asianet Suvarna News

ಸೂಪರ್ ಸ್ಟಾರ್'ಗೆ ಬೆದರಿಕೆ !

ಖ್ಯಾತ ನಿರ್ದೇಶಕ ಪಾ ರಂಜಿತ್ರೊಂದಿಗಿನ ತಮ್ಮ ಮುಂದಿನ ಚಿತ್ರದಲ್ಲಿ ರಜನೀಕಾಂತ್‌ 1926-1994 ನಡುವೆ ಬದುಕಿದ್ದ ಡಾನ್ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗಿದೆ.

Haji Mastans foster son threatens superstar Rajinikanth
  • Facebook
  • Twitter
  • Whatsapp

ಚೆನ್ನೈ(ಮೇ.14): ನಿಮ್ಮ ಮುಂದಿನ ಚಿತ್ರದಲ್ಲಿ ನನ್ನ ತಂದೆಯನ್ನು ಭೂಗತ ಪಾತಕಿ ಎಂದು ತೋರಿಸ ಕೂಡದು ಎಂದು ಭೂಗತ ಜಗತ್ತಿನ ಮಾಜಿ ಡಾನ್‌ ಹಾಜಿ ಮಸ್ತಾನ್‌ ಮಿರ್ಜಾನ ದತ್ತು ಪುತ್ರ ಸುಂದರ್‌ ಶೇಖರ್‌, ತಮಿಳು ಸೂಪರ್‌ಸ್ಟಾರ್‌ ರಜನೀಕಾಂತ್‌ಗೆ ಕಾನೂನು ನೋಟಿಸ್‌ ಜಾರಿಗೊಳಿಸಿದ್ದಾರೆ.
ಚಿತ್ರದಲ್ಲಿ ಹಾಜಿ ಮಸ್ತಾನ್‌ರನ್ನು ಕಳ್ಳಸಾಗಣೆದಾರ, ಭೂಗತ ಜಗತ್ತಿನ ಡಾನ್‌ ಎಂಬಂತೆ ಬಿಂಬಿಸದಂತೆ ರಜನೀಕಾಂತ್‌ಗೆ ಸುಂದರ್‌ ಅವರು ಜಾರಿಗೊಳಿಸಿರುವ ನೋಟಿಸ್‌ನಲ್ಲಿ ಎಚ್ಚರಿಸಲಾಗಿದೆ. ಖ್ಯಾತ ನಿರ್ದೇಶಕ ಪಾ ರಂಜಿತ್‌ರೊಂದಿಗಿನ ತಮ್ಮ ಮುಂದಿನ ಚಿತ್ರದಲ್ಲಿ ರಜನೀಕಾಂತ್‌ 1926-1994ರ ನಡುವೆ ಬದುಕಿದ್ದ ಡಾನ್‌ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗಿದೆ.
ತಮ್ಮ ಗಾಡ್‌ಫಾದರ್‌ ಚಿತ್ರದಲ್ಲಿ ತಂದೆಯನ್ನು ಕಳ್ಳಸಾಗಣೆ ದಾರ, ಡಾನ್‌ ಎಂಬಂತೆ ಬಿಂಬಿಸಿದರೆ ಕಾನೂನು ಸಮರ ನಡೆಸುವುದಾಗಿ ಹೇಳಿದ್ದಾರೆ.

Follow Us:
Download App:
  • android
  • ios