ನಾಲ್ವರು ಅಧಿಕಾರಿಗಳ ತಂಡ ಇಂದು ಮಧ್ಯಾಹ್ನ ಚೆನ್ನೈನ ಕಚೇರಿಯಲ್ಲಿ ದಾಳಿ ನಡೆಸಿದ್ದು, ಸಿನಿಮಾ ನಿರ್ಮಾಣ ಹಾಗೂ ಅದಕ್ಕೆ ಸಂಬಂಧಿಸಿದ ತೆರಿಗೆ ಮಾಹಿತಿಯನ್ನು ಸಂಗ್ರಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚೆನ್ನೈ(ಅ.23): ಸರಕು ಸೇವೆಗಳ ತೆರಿಗೆ ಗುಪ್ತಚರ ಇಲಾಖೆ ತಮಿಳು ನಟ ವಿಶಾಲ್ ಸಿನಿಮಾ ಕಂಪನಿ ಮೇಲೆ ದಾಳಿ ನಡೆಸಿದೆ.
ಲಕ್ಷಾಂತರ ರೂ. ತೆರಿಗೆ ಪಾವತಿಸಿರದ ಕಾರಣ ಈ ದಾಳಿ ನಡೆದಿದೆ ಎನ್ನಲಾಗಿದೆ ಆದರೆ ತಮಿಳು ನಟ ವಿಜಯ್ ಅಭಿನಯದ ಮೆರ್ಸೆಲ್ ಚಿತ್ರದ ಪರ ಮಾತನಾಡಿದ ಕಾರಣಕ್ಕಾಗಿಯೇ ದಾಳಿ ನಡೆಸಲಾಗಿದ್ದು, ಸಾಮಾಜಿಕ ಜಾಲತಾಣಗಳು ಹಾಗೂ ವಿಜಯ್ ಹಾಗೂ ವಿಶಾಲ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ನಾಯಕ ಹೆಚ್. ರಾಜ ಹಾಗೂ ವಿಶಾಲ್ ನಡೆವೆ ವಿಜಯ್ ಸಿನಿಮಾ ಮರ್ಸೆಲ್ ಬಗ್ಗೆ ಚರ್ಚೆ ನಡೆದಿತ್ತು. ಮರ್ಸೆಲ್ ಉತ್ತಮ ಸಿನಿಮಾವಾಗಿದ್ದು, ಭಾರತದಲ್ಲಿ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಪ್ರತಿಯೊಬ್ಬರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯ ಇದೆ' ಎಂದು ನಿನ್ನೆಯಷ್ಟೆ ಹೇಳಿಕೆ ನೀಡಿದ್ದರು.
ನಾಲ್ವರು ಅಧಿಕಾರಿಗಳ ತಂಡ ಇಂದು ಮಧ್ಯಾಹ್ನ ಚೆನ್ನೈನ ಕಚೇರಿಯಲ್ಲಿ ದಾಳಿ ನಡೆಸಿದ್ದು, ಸಿನಿಮಾ ನಿರ್ಮಾಣ ಹಾಗೂ ಅದಕ್ಕೆ ಸಂಬಂಧಿಸಿದ ತೆರಿಗೆ ಮಾಹಿತಿಯನ್ನು ಸಂಗ್ರಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿಶಾಲ್ ಸಿನಿಮಾ ಸಂಸ್ಥೆ 2013 ರಲ್ಲಿ ಸ್ಥಾಪನೆಗೊಂಡು ಒಟ್ಟು 6 ಸಿನಿಮಾಗಳನ್ನು ನಿರ್ಮಿಸಿದೆ. ಅವೆಲ್ಲ ಸಿನಿಮಾಗಳಿಗೂ ವಿಜಯ್ ಅವರೇ ನಾಯಕರಾಗಿದ್ದರು. ವಿಜಯ್ ಅವರು ತಮಿಳು ಸಿನಿಮಾ ನಿರ್ಮಾಪಕ ಮಂಡಳಿಯ ಅಧ್ಯಕ್ಷರು ಸಹ ಆಗಿದ್ದಾರೆ.
