ವಿಜಯ್ ಮಲ್ಯ ಜೀವನ ಶೀಘ್ರದಲ್ಲೇ ಸಿನಿಮಾ

Govinda To Play Vijay Mallya In Pahlaj Nihalanis Film
Highlights

ಹಾಸ್ಯಪ್ರಧಾನ ಚಿತ್ರಗಳ ನಾಯಕ ಎಂದೇ ಜನಪ್ರಿಯವಾಗಿರುವ ಗೋವಿಂದ ಮಲ್ಯ ಪಾತ್ರದಲ್ಲಿ ನಟಿಸಲಿದ್ದಾರೆ. ಕೇಂದ್ರೀಯ ಚಲನಚಿತ್ರ ಪ್ರಮಾಣಿಕೃತ ಮಂಡಳಿಯ ಮಾಜಿ ಅಧ್ಯಕ್ಷ ಪಹಲಾಜ್ ನಿಹಲಾನಿ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಸಿನಿಮಾದ ಹೆಸರು ರಂಗೀಲಾ ರಾಜ.

ನವದೆಹಲಿ(ಮೇ.29): ಭಾರತೀಯ ಬ್ಯಾಂಕುಗಳಿಗೆ ಸಾವಿರಾರು ಕೋಟಿ ಪಂಗನಾಮ ಹಾಕಿ ಲಂಡನ್'ನಲ್ಲಿ ತಲೆಮರೆಸಿಕೊಂಡಿರುವ ಸುಸ್ತಿದಾರ ವಿಜಯ್ ಮಲ್ಯ ಜೀವನಾದಾರಿತದ  ಬಗ್ಗೆ ಬಾಲಿವುಡ್'ನಲ್ಲಿ ಸಿನಿಮಾವಾಗಲಿದೆ. 
ಹಾಸ್ಯಪ್ರಧಾನ ಚಿತ್ರಗಳ ನಾಯಕ ಎಂದೇ ಜನಪ್ರಿಯವಾಗಿರುವ ಗೋವಿಂದ ಮಲ್ಯ ಪಾತ್ರದಲ್ಲಿ ನಟಿಸಲಿದ್ದಾರೆ. ಕೇಂದ್ರೀಯ ಚಲನಚಿತ್ರ ಪ್ರಮಾಣಿಕೃತ ಮಂಡಳಿಯ ಮಾಜಿ ಅಧ್ಯಕ್ಷ ಪಹಲಾಜ್ ನಿಹಲಾನಿ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಸಿನಿಮಾದ ಹೆಸರು ರಂಗೀಲಾ ರಾಜ.
ಮಲ್ಯ ಜೀವನದ ಬಗ್ಗೆ ಸಿನಿಮಾ ನಿರ್ದೇಶಿಸಲಿದ್ದು ಗೋವಿಂದ ಪ್ರಮುಖ ಪಾತ್ರವನ್ನು ನಿರ್ದೇಶಿಸಲಿದ್ದಾರೆ. ಪ್ರೇಕ್ಷಕರು ಗೋವಿಂದ ಪಾತ್ರದಲ್ಲಿ ರಂಗೀಲಾ ರಾಜದಲ್ಲಿ ಹೆಚ್ಚು ಮನರಂಜನೆಯನ್ನು ಪಡೆಯಲಿದ್ದಾರೆ ಎಂದು ನಿಹಲಾನಿ ತಿಳಿಸಿದ್ದಾರೆ.
ನಿಹಲಾನಿ ಅವರು  1986ರಲ್ಲಿ ಗೋವಿಂದ ಅವರ ಇಲಾಜಂ ಚಿತ್ರದೊಂದಿಗೆ ಸಿನಿಮಾ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ್ದರು. ರಂಗೀಲಾ ರಾಜದಲ್ಲಿ ಮೂವರು ನಾಯಕಿಯರು ಪಾತ್ರ ನಿರ್ವಹಿಸಲಿದ್ದು ಚಿತ್ರ ಬಹುತೇಕ ಹಾಸ್ಯಪ್ರಧಾನವಾಗಿರಲಿದೆಯಂತೆ. 
ಕಿಂಗ್'ಫಿಶರ್ ಸ್ಥಾಪಿಸುವ ಸಲುವಾಗಿ ಭಾರತೀಯ ವಿವಿಧ ಬ್ಯಾಂಕುಗಳಿಂದ 9 ಸಾವಿರ ಕೋಟಿ ಸಾಲ ಮಾಡಿದ್ದ ಮಲ್ಯ ಕೇಂದ್ರ ಸರ್ಕಾರ  ಘೋಷಿತ ಅಪರಾಧಿ ಎಂದು ಘೋಷಿಸಿದ ತಕ್ಷಣ ದೇಶದಿಂದ ತಲೆಮರೆಸಿಕೊಂಡು ಲಂಡನ್'ನಲ್ಲಿ ನೆಲೆಸಿದ್ದಾನೆ.  

loader