ಮುಂಬೈ(ಜು.13): ಅಮಿತಾಭ್‌ ಬಚ್ಚನ್‌ ಕುಟುಂಬಕ್ಕೆ ಕೊರೋನಾ ಸೋಂಕು ದೃಢಪಟ್ಟಬೆನ್ನಲ್ಲೇ ‘ಬಾಲಿವುಡ್‌ ನಟರಾದ ಹೇಮಾ ಮಾಲಿನಿ, ರಣಬೀರ್‌ ಕಪೂರ್‌ ಮತ್ತು ನೀತು ಕಪೂರ್‌ ಅವರಿಗೂ ಕೊರೋನಾ ಸೋಂಕು ದೃಢಪಟ್ಟಿದೆ, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂಬ ವದಂತಿ ಹಬ್ಬಿದೆ.

ಈ ಸುದ್ದಿ ವೈರಲ್‌ ಆಗುತ್ತಿದ್ದಂತೆಯೇ 71 ವರ್ಷದ ನಟಿ, ಸಂಸದೆ ಹೇಮಾ ಮಾಲಿನಿ ವಿಡಿಯೋ ಮೂಲಕ ‘ನನಗೇನೂ ಆಗಿಲ್ಲ, ಆರೋಗ್ಯವಾಗಿದ್ದೇನೆ’ ಎಂದು ಸ್ಪಷ್ಟನೆ ನೀಡಿದ್ದಾರೆ. ಹಾಗೆಯೇ ರಣ್‌ಬೀರ್‌ ಕಪೂರ್‌ ಮತ್ತು ನೀತು ಕಪೂರ್‌ ಅವರೂ ಆರೋಗ್ಯವಾಗಿದ್ದಾರೆ. ಸುಳ್ಳು ಸುದ್ದಿ ಹರಡಬೇಡಿ ಎಂದು ರಿಷಿ ಕಪೂರ್‌ ಪುತ್ರಿ ರಿದ್ದಿಮಾ ಕಪೂರ್‌ ಸಾಹ್ನಿ ಮನವಿ ಮಾಡಿಕೊಂಡಿದ್ದಾರೆ.

ಬಚ್ಚನ್‌, ಅಭಿಷೇಕ್‌ಗೆ ಚಿಕಿತ್ಸೆ; ಚೇತರಿಕೆ

ಕೊರೋನಾ ಹಿನ್ನೆಲೆಯಲ್ಲಿ ಶನಿವಾರ ಮುಂಬೈನ ನಾನಾವತಿ ಆಸ್ಪತ್ರೆಗೆ ದಾಖಲಾಗಿರುವ ಹಿರಿಯ ನಟ ಅಮಿತಾಭ್‌ ಬಚ್ಚನ್‌ ಮತ್ತು ಅವರ ಪುತ್ರ ಅಭಿಷೇಕ್‌ ಬಚ್ಚನ್‌ ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಅವರ ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಐಶ್ವರ್ಯ ರೈ ಮತ್ತು ಮಗಳು ಆರಾಧ್ಯಾಗೂ ಕೊರೋನಾ ಪಾಸಿಟಿವ್!

ಅಮಿತಾಭ್‌ ಅವರು ಹೋಂ ಕ್ವಾರಂಟೈನ್‌ನಲ್ಲಿ ಇರಬಹುದಾಗಿತ್ತು. ಆದರೆ ಅವರಿಗೆ ಲಿವರ್‌ ಸಮಸ್ಯೆ ಇರುವುದರಿಂದ ಸೋಂಕು ಉಲ್ಬಣಿಸಬಹುದು ಎಂಬ ಕಾರಣಕ್ಕೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ನಡುವೆ ದೇಶದ ಹಲವೆಡೆ ಅಮಿತಾಭ್‌ ಗುಣಮುಖರಾಗಲೆಂದು ಹಾರೈಸಿ ಅಭಿಮಾನಿಗಳು ಪೂಜೆ ಮಾಡಿದರು.

ಬಾಲಿವುಡ್ ಹಿರಿಯ ನಟ ಅಮಿತಾಬ್ ಬಚ್ಚನ್‌ಗೆ ಕೊರೋನಾ; ಆಸ್ಪತ್ರೆ ದಾಖಲು!