ಮುಂಬೈ(ಜು.11): ದೇಶದಲ್ಲಿ ಕೊರೋನಾ ವೈರಸ್ ಅಟ್ಟಹಾಸ ಅತೀಯಾಗಿದೆ. ಮುಂಬೈ ಮಹಾನಗರದಲ್ಲಿ ಕೊರೋನಾ ನಿಯಂತ್ರಣಕ್ಕೆ ಮೀರಿ ಹರಡುತ್ತಿದೆ. ಇದೀಗ ಬಾಲಿವುಡ್ ಹಿರಿಯ ನಟ ಅಮಿತಾಬ್ ಬಚ್ಚನ್‌ಗೆ ಕೊರೋನಾ ವೈರಸ್ ದೃಢಪಟ್ಟಿದೆ. 

 

ಅಮಿತಾಬ್ ಬಚ್ಚನ್ ಅವರನ್ನು ಮುಂಬೈನ ನಾನಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಷ್ಟೇ ಅಲ್ಲ ವೈದ್ಯರ ತಂಡ ಚಿಕಿತ್ಸೆ ನೀಡುತ್ತಿದ್ದಾರೆ. ಇನ್ನು ಬಚ್ಚನ್ ಕುಟುಂಬಸ್ಥರು, ಸಿಬ್ಬಂದಿಗಳು, ಸಹಾಯಕರಿಗೆ ಇದೀಗ ಕೊರೋನಾ ಪರೀಕ್ಷೆ ಮಾಡಿಸಲಾಗುತ್ತಿದೆ. ಇಷ್ಟೇ ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ. 

ಪರದೆ ಮೇಲೆ ಅಮಿತಾಬ್‌ ರೇಖಾಳ ರೊಮ್ಯಾನ್ಸ್‌ ನೋಡಿ ಅತ್ತಿದ್ದರಂತೆ ಜಯಾ ಬಚ್ಚನ್‌

ಈ ಕುರಿತು ಅಮಿತಾಬ್ ಬಚ್ಚನ್ ಟ್ವೀಟ್ ಮೂಲಕ ಕೊರೋನಾ ವೈರಸ್ ತಗುಲಿರುವುದನ್ನು ಟ್ವೀಟ್ ಮೂಲಕ ಖಚಿತಪಡಿಸಿದ್ದಾರೆ. ಕಳೆದ 10 ದಿನಗಳಲ್ಲಿ ತನ್ನೊಂದಿಗೆ ಸಂಪರ್ಕದಲ್ಲಿದ್ದವರು ಕೊರೋನಾ ವೈರಸ್ ಟೆಸ್ಟ್ ಪರೀಕ್ಷೆ ನಡೆಸುವಂತೆ ಸೀನಿಯರ್ ಬಚ್ಚನ್ ಮನವಿ ಮಾಡಿದ್ದಾರೆ.

ಅಮಿತಾಬ್ ಬಚ್ಚನ್ ಟ್ವೀಟ್ ಮೂಲಕ ಕೊರೋನಾ ತಗುಲಿರುವುದನ್ನು ಖಚಿತ ಪಡಿಸುತ್ತಿದ್ದಂತೆ ಬಾಲಿವುಡ್ ಸೇರಿದಂತೆ ಭಾರತೀಯ ಚಿತ್ರರಂಗ ಶೀಘ್ರ ಚೇರಿಸಿಕೊಳ್ಳಲು ಪ್ರಾರ್ಥಿಸಿದ್ದಾರೆ