ಪದೇ ಪದೇ ಸೋಷಿಯಲ್‌ ಮೀಡಿಯಾಗಳಲ್ಲಿ ಗಣೇಶ್‌ ಅವರು ಪಾಲ್ಗೊಳ್ಳಲಿ ಅಂತ ಅವರ ಅಭಿಮಾನಿಗಳು ಕೇಳುತ್ತಲೇ ಇದ್ದರು. ಈ ನಿಟ್ಟಿನಲ್ಲಿ ಗಣೇಶ್‌ ಅವರ ಜೊತೆ ಚಾನಲ್‌ ಮಾತುಕತೆ ನಡೆಸುತ್ತಿರುವುದನ್ನು ಸ್ವತಃ ಗಣೇಶ್‌ ಖಚಿತಪಡಿಸಿದ್ದು, ಈ ಮೂರನೇ ಸೀಜನ್‌ನ ಸಮಾಪ್ತಿ ಸಂಚಿಕೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೋ ಇಲ್ಲವೋ ಎಂಬ ಬಗ್ಗೆ ಇನ್ನೂ ಖಚಿತಪಡಿಸಿಲ್ಲ. ಆದರೆ ಗಣೇಶ್‌ ಅವರ ಜನ್ಮದಿನದ ಹಿನ್ನೆಲೆಯಲ್ಲಿ ಜು. 1 ಮತ್ತು 2ಕ್ಕೆ ಅವರ ಸಂಚಿಕೆ ಪ್ರಸಾರವಾಗಲಿದೆ ಎನ್ನುವುದಂತೂ ಖಚಿತ.
ವೀಕೆಂಡ್ ವಿತ್ ರಮೇಶ್ ಎಂಬ ಜನಪ್ರಿಯ ಕಾರ್ಯಕ್ರಮದ ಕೊನೆಯ ಅತಿಥಿ ಗೋಲ್ಡನ್ ಸ್ಟಾರ್ ಗಣೇಶ್ ಅವರಾ?
ಪದೇ ಪದೇ ಸೋಷಿಯಲ್ ಮೀಡಿಯಾಗಳಲ್ಲಿ ಗಣೇಶ್ ಅವರು ಪಾಲ್ಗೊಳ್ಳಲಿ ಅಂತ ಅವರ ಅಭಿಮಾನಿಗಳು ಕೇಳುತ್ತಲೇ ಇದ್ದರು. ಈ ನಿಟ್ಟಿನಲ್ಲಿ ಗಣೇಶ್ ಅವರ ಜೊತೆ ಚಾನಲ್ ಮಾತುಕತೆ ನಡೆಸುತ್ತಿರುವುದನ್ನು ಸ್ವತಃ ಗಣೇಶ್ ಖಚಿತಪಡಿಸಿದ್ದು, ಈ ಮೂರನೇ ಸೀಜನ್ನ ಸಮಾಪ್ತಿ ಸಂಚಿಕೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೋ ಇಲ್ಲವೋ ಎಂಬ ಬಗ್ಗೆ ಇನ್ನೂ ಖಚಿತಪಡಿಸಿಲ್ಲ. ಆದರೆ ಗಣೇಶ್ ಅವರ ಜನ್ಮದಿನದ ಹಿನ್ನೆಲೆಯಲ್ಲಿ ಜು. 1 ಮತ್ತು 2ಕ್ಕೆ ಅವರ ಸಂಚಿಕೆ ಪ್ರಸಾರವಾಗಲಿದೆ ಎನ್ನುವುದಂತೂ ಖಚಿತ.
ಅವರು ಓದಿದ್ದು, ಅನಂತರ ಕಿರುತೆರೆಯಲ್ಲಿ ಕಾಮಿಡಿ ಟೈಮ್ ಮೂಲಕ ಮನೆ ಮಾತಾಗಿದ್ದು, ಅನಂತರ ಅವರ ಬದುಕನ್ನೇ ಬದಲಿಸಿದ ‘ಮುಂಗಾರು ಮಳೆ', ಅನಂತರದ ಸೋಲು, ಗೆಲುವುಗಳು, ಪ್ರೇಮ ವಿವಾಹ, ಸಂಸಾರ, ಕಿರುತೆರೆ- ಹಿರಿತೆರೆಗಳ ಯಶಸ್ಸು- ಇವೆಲ್ಲವನ್ನೂ ಗಣೇಶ್ ಆ ವೇದಿಕೆಯಲ್ಲಿ ತೆರೆದಿಡಲಿದ್ದಾರೆ.
