ಬೆಂಗಳೂರು (ಜೂ. 02): ಲೋಕಸಭಾ ಚುನಾವಣೆಯಲ್ಲಿ ಇಡೀ ದೇಶದ ಗಮನ ಸೆಳೆದಿದ್ದ ‘ಚೌಕಿದಾರ್’ ಪದ ಈಗ ಸಿನಿಮಾ ಆಗುತ್ತಿದೆ. ‘ಗೋಲ್ಡನ್ ಸ್ಟಾರ್’ ಗಣೇಶ್ ಈ ಚಿತ್ರದಲ್ಲಿ ಚೌಕಿದಾರನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದು ಸಮಾಜ ಕಾಯುವ ಕಾವಲುಗಾರನ ಕುರಿತ ಸಿನಿಮಾ ಎಂದು ಸಿನಿಮಾ ನಿರ್ದೇಶಕ ಚಂದ್ರಶೇಖರ ಬಂಡಿಯಪ್ಪ ಹೇಳಿದ್ದಾರೆ.

ಗಣೇಶ್ ಈ ಸಿನಿಮಾದಲ್ಲಿ 55 ವರ್ಷದ ಹಿರಿಯ ವ್ಯಕ್ತಿಯ ಪಾತ್ರ ಮಾಡುತ್ತಿದ್ದಾರೆ.ಈಗಾಗಲೇ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ‘ಚೌಕಿದಾರ’ ಟೈಟಲ್ ನೋಂದಣಿ ಆಗಿದೆ. ಈ ಚಿತ್ರ ಯಾರೋ ಒಬ್ಬ ವ್ಯಕ್ತಿಗೆ ಸಂಬಂಧಿಸಿದ್ದಲ್ಲ. ಆಗಸ್ಟ್ ನಲ್ಲಿ ಚಿತ್ರೀಕರಣ ಶುರುವಾಗಲಿದೆ ಎಂದು ತಿಳಿಸಿದ್ದಾರೆ. ಆದರೆ ಈ ಕುರಿತು ಕೇಳಲು ಗಣೇಶ್ ಅವರನ್ನು ಸಂಪರ್ಕಿಸಿ ದಾಗ ‘ಇನ್ನೂ ಫೈನಲ್ ಆಗಿಲ್ಲ’ ಎಂದಿದ್ದಾರೆ.