ಚಮಕ್ ನಂತರ ಗಣೇಶ್ ನಟಿಸುತ್ತಿರುವುದು ಪ್ರಶಾಂತ್ ರಾಜ್ ನಿರ್ದೇಶನದ ಆರೆಂಜ್ ಚಿತ್ರದಲ್ಲಿ. ಅದಾದ ನಂತರ ಅವರು ತೊಡಗಿಕೊಳ್ಳಲಿರುವ ಸಿನಿಮಾದಲ್ಲಿ ಜಗ್ಗೇಶ್ ಕೂಡ ನಟಿಸುತ್ತಾರೆ.

ಬೆಂಗಳೂರು (ಜ.09): ಚಮಕ್ ನಂತರ ಗಣೇಶ್ ನಟಿಸುತ್ತಿರುವುದು ಪ್ರಶಾಂತ್ ರಾಜ್ ನಿರ್ದೇಶನದ ಆರೆಂಜ್ ಚಿತ್ರದಲ್ಲಿ. ಅದಾದ ನಂತರ ಅವರು ತೊಡಗಿಕೊಳ್ಳಲಿರುವ ಸಿನಿಮಾದಲ್ಲಿ ಜಗ್ಗೇಶ್ ಕೂಡ ನಟಿಸುತ್ತಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಗಣೇಶ್ ಸದ್ಯಕ್ಕೆ ಥ್ರಿಲ್ಲಾಗಿರುವುದು ಅದೇ ಕಾರಣಕ್ಕೆ. ‘ಹೈಸ್ಕೂಲ್ ದಿನಗಳಿಂದಲೂ ನಾನು ನಟ ಜಗ್ಗೇಶ್ ಅವರ ಅಭಿಮಾನಿ. ‘ಸರ್ವರ್ ಸೋಮಣ್ಣ’ ಹಾಗೂ ‘ತರ್ಲೆ ನನ್ಮಗ’ ಚಿತ್ರಗಳನ್ನು ಐದಾರು ಬಾರಿ ನೋಡಿದ್ದೇನೆ. ‘ಬೇಡ ಕೃಷ್ಣ ರಂಗಿನಾಟ’ ಚಿತ್ರ ನೋಡುವುದಕ್ಕೆ ಹಲಸೂರಿನ ನಾಗಾ ಥಿಯೇಟರ್‌ಗೆ ಹೋಗಿದ್ದೆ. ಆಗ ಅಷ್ಟೊಂದು ಕ್ರೇಜ್ ಇತ್ತು. ಅವರ ಜತೆಗೆ ಈಗ ಸಿನಿಮಾ ಮಾಡುವ ಅವಕಾಶ ಸಿಗುತ್ತಿದೆ ಅಂದ್ರೆ ನನ್ನ ಅದೃಷ್ಟವೇ ಅದು. ಸದ್ಯಕ್ಕೆ ನಿರ್ಮಾಪಕರ ಜತೆ ಒಂದು ಸುತ್ತಿನ ಮಾತುಕತೆ ಮಾತ್ರ ನಡೆದಿದೆ. ಇನ್ನಷ್ಟು ಮಾತುಕತೆ ಆಗಬೇಕಿದೆ. ಒಟ್ಟಿನಲ್ಲಿ ನಾನಂತೂ ಜಗ್ಗೇಶ್ ಜತೆಗೆ ಅಭಿನಯಿಸಲು ಕಾತರದಿಂದಿದ್ದೇನೆ’ ಎನ್ನುತ್ತಾರೆ ಗಣೇಶ್.