ಎರಡು ಮಕ್ಕಳಿದ್ದರೇನಂತೆ ಈಕೆಯ ಫಿಟ್'ನೆಸ್'ಗೆನೂ ಕಮ್ಮಿಯಿಲ್ಲ! ಫಿಟ್ನೆಸ್ ಸೀಕ್ರೇಟ್ ಏನು ಗೊತ್ತಾ?

First Published 29, Jan 2018, 12:38 PM IST
Genelia D Souza Fitness Secret
Highlights

ಎರಡು ಮಕ್ಕಳ ತಾಯಿ ಮಗುವಿನಂಥಾ ನಗುವಿನ ಜೆನಿಲಿಯಾ ಡಿಸೋಜ. ವಯಸ್ಸು ಇಂದಿನ ಸ್ಟಾರ್‌ನಟಿಯರಿಗಿಂತ ಕಡಿಮೆಯಾದರೂ ಮಕ್ಕಳಾದ ಕಾರಣ ದೇಹದ ಫಿಟ್‌ನೆಸ್ ಮೊದಲಿನಂತೆ ಮೈಂಟೇನ್ ಮಾಡೋದು ಸವಾಲು. ಆದರೆ ಈ ಉತ್ಸಾಹದ ಬುಗ್ಗೆಗೆ ಇದು ಕಷ್ಟವಲ್ಲ. ಆಕೆ ಫಿಟ್‌ನೆಸ್, ಡಯೆಟ್ ಡೈರಿ ಇಲ್ಲಿದೆ.

ಬೆಂಗಳೂರು (ಜ.29): ಎರಡು ಮಕ್ಕಳ ತಾಯಿ ಮಗುವಿನಂಥಾ ನಗುವಿನ ಜೆನಿಲಿಯಾ ಡಿಸೋಜ. ವಯಸ್ಸು ಇಂದಿನ ಸ್ಟಾರ್‌ನಟಿಯರಿಗಿಂತ ಕಡಿಮೆಯಾದರೂ ಮಕ್ಕಳಾದ ಕಾರಣ ದೇಹದ ಫಿಟ್‌ನೆಸ್ ಮೊದಲಿನಂತೆ ಮೈಂಟೇನ್ ಮಾಡೋದು ಸವಾಲು. ಆದರೆ ಈ ಉತ್ಸಾಹದ ಬುಗ್ಗೆಗೆ ಇದು ಕಷ್ಟವಲ್ಲ. ಆಕೆ ಫಿಟ್‌ನೆಸ್, ಡಯೆಟ್ ಡೈರಿ ಇಲ್ಲಿದೆ.

ಡಯೆಟ್ ಹೇಗಿರುತ್ತೆ?

ಬೆಳಗ್ಗೆದ್ದು ನಿಂಬೆರಸ ಮತ್ತು ಜೇನುತುಪ್ಪವನ್ನು ಬಿಸಿನೀರಿಗೆ ಹಾಕಿ ಕುಡೀತಾರೆ. ಇದು ದೇಹದಲ್ಲಿರುವ ವಿಷಕಾರಿ ಅಂಶವನ್ನು ಹೊರಹಾಕಲು ಸಹಕಾರಿ. 2 ಗಂಟೆಗೊಮ್ಮೆ ಏನಾದ್ರೂ ತಿನ್ನುತ್ತಾ ಇರಬೇಕು ಅನ್ನೋದು ಇವರು ಮೊದಲಿನಿಂದ ಪಾಲಿಸಿಕೊಂಡು ಬಂದ ನಿಯಮ. ಚಿಕನ್ ಅಂದ್ರೆ ಜೀವ. ವಾರದಲ್ಲಿ ೫ ದಿನ ಇವರ ಡಯೆಟ್‌ನಲ್ಲಿ ಫಿಶ್ ಇರಲೇಬೇಕು. ಇದು ಆರೋಗ್ಯಕ್ಕೆ ತುಂಬ ಒಳ್ಳೆಯದು ಅನ್ನೋದು ಇವರ ಅಭಿಪ್ರಾಯ. ಹಾಗೇ ರೆಡ್‌'ಮೀಟ್ ಅನ್ನು ಮಾತ್ರ ಈ ಸುಂದ್ರಿ ಯಾವತ್ತೂ ತಿನ್ನಲ್ಲ. ಪೌಷ್ಠಿಕಾಂಶ ಇರುವ ಫುಡ್‌ಅನ್ನೇ ಪ್ರಿಫರ್ ಮಾಡ್ತಾರೆ. ಮೊಟ್ಟೆ, ರೋಟಿ, ತರಕಾರಿ ಇವರ ಡಯೆಟ್‌ನಲ್ಲಿ ಸಮೃದ್ಧವಾಗಿದೆ.

ವರ್ಕೌಟ್ ಹೀಗಿರುತ್ತೆ

ಚಿಕ್ಕ ವಯಸ್ಸಿನಲ್ಲೇ ಅಥ್ಲೆಟ್ ಆಗಿದ್ದ ಜಿನಿಲಿಯಾಗೆ ಇಂದಿಗೂ ಬೆಳಗಿನ ಜಾಗಿಂಗ್ ಸಖತ್ ಇಷ್ಟ. ಇದರಿಂದ ಮನಸ್ಸು ಪ್ರಫುಲ್ಲವಾಗುತ್ತೆ. ಇಡೀ ದಿನಕ್ಕೆ ಬೇಕಾದಷ್ಟು ಫ್ರೆಶ್‌ನೆಸ್‌ಅನ್ನು ಈ ಮಾರ್ನಿಂಗ್ ವಾಕ್ ತಂದುಕೊಡುತ್ತೆ ಅಂತಾರೆ. ಅತಿಯಾದ ವ್ಯಾಯಾಮ ಇವರಿಗಿಷ್ಟ ಇಲ್ಲ. ಜಿಮ್‌'ಗಿಂತಲೂ ಸಹಜವಾದ ವ್ಯಾಯಾಮ ಬಹಳ ಒಳ್ಳೆಯದು ಅನ್ನೋ ಜಿನಿಲಿಯಾಗೆ ತೂಕ ಹೆಚ್ಚಾಗೋದರ ಬಗ್ಗೆ ಭಯ ಇಲ್ಲ. ಬದಲಾಗಿ ಆರೋಗ್ಯವಂತ ಶರೀರ ಇದ್ರೆ ಬೇರೇನೋ ಬೇಕಿಲ್ಲ ಅನ್ನೋ ಮನಸ್ಥಿತಿ ಇವರದು.

 

loader