ಚಿತ್ರರಂಗದಲ್ಲಿ ಗಂಗಮ್ಮ ಹಾಡಿಗೆ ಭಾರಿ ಬೇಡಿಕೆ

First Published 2, Aug 2018, 10:37 AM IST
Gangamma to sing in Padmavathi film
Highlights

ಕೊಪ್ಪಳದ ಎಸ್ ಜಾನಕಿ ಎಂದೇ ಪ್ರಸಿದ್ಧರಾದ ಗಂಗಮ್ಮ ಕಂಚಿನ ಕಂಠಕ್ಕೆ ಚಿತ್ರರಂಗದಲ್ಲಿ ಬೇಡಿಕೆ ಹೆಚ್ಚಾಗಿದೆ. ರಾಜಶೇಖರ್ ನಿರ್ದೇಶನದ ‘ಪರದೇಸಿ ಕೇರಾಫ್ ಲಂಡನ್’ ಚಿತ್ರಕ್ಕೆ ಹಾಡಿ ಸಿನಿಮಾ ಜಗತ್ತಿಗೆ ಪರಿಚಯವಾದ ಅವರಿಗೆ ಒಂದಾದ ಮೇಲೊಂದು ಅವಕಾಶಗಳು ಸಿಗುತ್ತಿವೆ.

ಈಗ ‘ಪದ್ಮಾವತಿ’ ಚಿತ್ರದಲ್ಲಿ ಹಾಡಿದ್ದಾರೆ ಗಂಗಮ್ಮ. ದಾಮೋದರ್ ನಿರ್ಮಾಣದ ಈ ಚಿತ್ರವನ್ನು ಮಿಥುನ್ ಚಂದ್ರಶೇಖರ್ ನಿರ್ದೇಶಿಸಿದ್ದಾರೆ. ವಿಕ್ರಂ ಆರ್ಯ ನಾಯಕ ನಟ. ಈ ಚಿತ್ರದ ಎರಡು ಹಾಡಿಗೆ ಗಂಗಮ್ಮ ಧ್ವನಿ ನೀಡಿದ್ದಾರೆ.

ಕೊಪ್ಪಳದ ಆರ್ಕೆಸ್ಟ್ರಾವೊಂದರಲ್ಲಿ ಗಾಯಕಿ ಆಗಿರುವ ಗಂಗಮ್ಮ, ತಮ್ಮ ಮಧುರವಾದ ಕಂಠದೊಂದಿಗೆ ಸಂಗೀತ ಪ್ರಿಯರ ಗಮನ ಸೆಳೆದಿದ್ದು ಫೇಸ್‌ಬುಕ್ ಮೂಲಕ. ಇತ್ತೀಚೆಗಷ್ಟೇ ಫೇಸ್‌ಬುಕ್‌ನಲ್ಲಿ ಕಾಣಿಸಿಕೊಂಡ ಅವರ ಗಾಯನದ ವಿಡಿಯೋ ವೈರಲ್ ಆಗಿತ್ತು. ಅಲ್ಲಿಂದ ಬೆಳಕಿಗೆ ಬಂದು ಸಿನಿಮಾದತ್ತ ಮುಖ ಮಾಡಿರುವ ಅವರಿಗೆ ಇಲ್ಲಿ ಅವಕಾಶಗಳು ಹೆಚ್ಚುತ್ತಿರುವುದು ವಿಶೇಷ.

"

‘ಗಾಯಕಿ ಗಂಗಮ್ಮ ಅವರ ಬಗ್ಗೆ ನಮಗೂ ಗೊತ್ತಾಗಿದ್ದು ಫೇಸ್‌ಬುಕ್ ಮೂಲಕವೇ. ತುಂಬಾ ಸೊಗಸಾಗಿತ್ತು ಅವರ ಕಂಠ ಸಿರಿ. ಆ ವೇಳೆಗಾಗಲೇ ಚಿತ್ರದ ಒಂದು ಹಾಡಿಗೆ ನಾವು ಸಾಕಷ್ಟು ಗಾಯಕರನ್ನು ಭೇಟಿ ಮಾಡಿ, ಹಾಡುವಂತೆ ಕೇಳಿಕೊಂಡಿದ್ದೆವು. ಆದ್ರೆ, ಅವರ ಧ್ವನಿ ಚಿತ್ರದಲ್ಲಿನ

ಸಾಹಿತ್ಯಕ್ಕೆ ಸರಿ ಹೊಂದದ ಕಾರಣ, ಗಾಯಕರ ಹುಡುಕಾಟ ನಡೆದೇ ಇತ್ತು. ಆಗ ಆ ಹಾಡಿಗೆ ಸೂಕ್ತ ಎನಿಸಿದವರು ಕೊಪ್ಪಳದ ಗಂಗಮ್ಮ. ತಕ್ಷಣವೇ ಅವರ ಸಂಪರ್ಕ ಮಾಡಿ, ಚಿತ್ರಕ್ಕೆ ಹಾಡುವಂತೆ ಕೇಳಿಕೊಂಡಿದ್ದೇವು. ಅದಕ್ಕವರು ಒಪ್ಪಿಕೊಂಡರು. ಒಂದು ಹಾಡಿನ ಬದಲಿಗೆ ಈಗ ಎರಡು ಹಾಡಿಗೆ ಅವರು ಧ್ವನಿ ನೀಡುತ್ತಿದ್ದಾರೆ. ಅವರು ಚಿತ್ರಕ್ಕೆ ಹಾಡಿರುವುದಕ್ಕೆ ಖುಷಿ ಆಗುತ್ತಿದೆ. ಹಳ್ಳಿ ಹಕ್ಕಿಗೆ ಅವಕಾಶ ಕೊಟ್ಟಿದ್ದಕ್ಕೂ ಸಂತೋಷವಾಗುತ್ತಿದೆ’ ಎನ್ನುತ್ತಾರೆ ಪದ್ಮಾವತಿ ಚಿತ್ರದ ನಾಯಕ ನಟ ವಿಕ್ರಂ ಆರ್ಯ.

"

 

loader