ಹೆಚ್.ಡಿ. ಕುಮಾರಸ್ವಾಮಿಯವರ ಹಲವು ವರ್ಷಗಳ ಕನಸು ನನಸಾಗುವ ಸಮಯ ಬಂದಿದೆ. ಕನ್ನಡದಲ್ಲಿ ಬಾಹುಬಲಿಯಂಥ ಭಾರೀ ಬಜೆಟ್ ಸಿನಿಮಾ ಮಾಡೋಕೆ ಸಜ್ಜಾಗಿದ್ದಾರೆ ನಿರ್ಮಾಪಕ ಕುಮಾರಸ್ವಾಮಿ. ಈ ಅದ್ದೂರಿ ಸಿನಿಮಾಗೆ ಪುತ್ರ ನಿಖಿಲ್ ಕುಮಾರಸ್ವಾಮಿ ನಾಯಕ.

ಜಾಗ್ವರ್ ಸ್ಟಾರ್ ನಿಖಿಲ್ ಕುಮಾರಸ್ವಾಮಿ ಮತ್ತೆ ಸ್ಯಾಂಡಲ್'ವುಡ್ ನಲ್ಲಿ ಟಾಕ್ ಆಫ್ ದಿ ಟೌನ್ ಆಗಿದ್ದಾರೆ. ಚೊಚ್ಚಲ ಚಿತ್ರದಿಂದಲೇ ಸ್ಟಾರ್ ಪಟ್ಟ ಅಲಂಕರಿಸಿದ ನಟ ನಿಖಿಲ್. ಜಾಗ್ವರ್ ಸಿನಿಮಾ ಮೂಲಕ ಯೂತ್'ಸ್ಟಾರ್ ಆಗಿರೋ ನಿಖಿಲ್ ಕುಮಾರಸ್ವಾಮಿ ಸದ್ಯ ಗಾಂಧಿನಗರದಲ್ಲಿ ತಮ್ಮದೆ ಬೇಡಿಕೆ ಹೊಂದಿದ್ದಾರೆ. ತಮ್ಮ ಹೋಂ ಬ್ಯಾನರ್'ನಲ್ಲಿ ನಿರ್ಮಾಣ ಆಗುತ್ತಿರುವ ಇನ್ನು ಹೆಸರಿಡದ ಚಿತ್ರದಲ್ಲಿ ನಿಖಿಲ್ ಬ್ಯುಜಿಯಾಗಿರುವ ಬೆನ್ನಲ್ಲೇ, ಮತ್ತೊಂದು ಬಿಗ್ ಬಜೆಟ್ ಸಿನಿಮಾಕ್ಕೆ ನಿಖಿಲ್ ಕುಮಾರಸ್ವಾಮಿ ಗ್ರಿನ್ ಸಿಗ್ನಲ್ ಕೊಟ್ಟಿದ್ದಾರೆ.

ನಾಡಪ್ರಭು ಕೆಂಪೇಗೌಡನಾಗಿ ನಿಖಿಲ್ ಕುಮಾರಸ್ವಾಮಿ. ಹೆಚ್.ಡಿ. ಕುಮಾರಸ್ವಾಮಿಯವರ ಹಲವು ವರ್ಷಗಳ ಕನಸು ನನಸಾಗುವ ಸಮಯ ಬಂದಿದೆ. ಕನ್ನಡದಲ್ಲಿ ಬಾಹುಬಲಿಯಂಥ ಭಾರೀ ಬಜೆಟ್ ಸಿನಿಮಾ ಮಾಡೋಕೆ ಸಜ್ಜಾಗಿದ್ದಾರೆ ನಿರ್ಮಾಪಕ ಕುಮಾರಸ್ವಾಮಿ. ಈ ಅದ್ದೂರಿ ಸಿನಿಮಾಗೆ ಪುತ್ರ ನಿಖಿಲ್ ಕುಮಾರಸ್ವಾಮಿ ನಾಯಕ. ನಾಡಪ್ರಭು ಕೆಂಪೇಗೌಡರ ಜೀವನಾಧಾರಿತ ಕತೆ ಇದಾಗಿದೆ. ನಿಖಿಲ್' ಕುಮಾರ ಸ್ವಾಮಿ, ಬೆಂಗಳೂರನ್ನ ಕಟ್ಟಿದ ಕೆಂಪೇಗೌಡನ ಪಾತ್ರವನ್ನ ಮಾಡಲಿದ್ದಾರೆ..ಬಾಹುಬಲಿ ಸಿನಿಮಾದ ಸಿ ಜಿ ವರ್ಕ್​ ಮಾಡಿದ ರಾಘವ್ ಈ ಚಿತ್ರಕ್ಕೆ ಸಿ ಜಿ ವರ್ಕ್​ ಮಾಡಲಿದ್ದಾರೆ. ನಿರ್ದೇಶಕರ ಆಯ್ಕೆ ಇನ್ನೂ ಆಗಬೇಕಿದೆ. ಈ ಸಿನಿಮಾವನ್ನ ಕನ್ನಡ ಮತ್ತು ತೆಲುಗು ನಿರ್ಮಾಪಕರು ಬಹು ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಿದ್ದಾರೆ ಅಂತಲೂ ಕೂಡ ನಿಖಿಲ್ ಆಪ್ತವಲಯ ತಿಳಿಸಿದೆ.ಎಲ್ಲಾ ಅಂದು ಕೊಂಡಂತೆ ಆದರೆ ಮುಂದಿನ ವರ್ಷ ನಾಡಪ್ರಭು ಕೆಂಪೇಗೌಡ ಸಿನಿಮಾ ಸೆಟ್ಟೇರಲಿದೆ.