ಬೆಂಗಳೂರಿನ ಗಾಂಧಿಭವನದಿಂದ ಮೂರು ಅಡಿ ಎತ್ತರದ ಗಾಂಧೀಜಿಯವರ ಫೈಬರ್ ಪ್ರತಿಮೆಯನ್ನ ನಿನ್ನೆಯೇ ವಿಮಾನದ ಮೂಲಕ ದುಬೈಗೆ ಸಾಗಿಸಲಾಯ್ತು. ದುಬೈನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯಲ್ಲಿ ಗಾಂಧೀಜಿಯವರ ಈ ಪ್ರತಿಮೆ ಪ್ರತಿಷ್ಠಾಪನೆ ಮಾಡಲಾಗುತ್ತಿದೆ. ಕಾರ್ಯಕ್ರಮದಲ್ಲಿ ದುಬೈನಲ್ಲಿರುವ ಕನ್ನಡಿಗರು,ಭಾರತೀಯರು ಸೇರಿದಂತೆ ಅರಬ್ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ.
ದುಬೈ(ನ.05): ಇದೇ ಮೊದಲ ಬಾರಿಗೆ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ಪ್ರತಿಮೆಯನ್ನ ನಾಳೆ ದುಬೈನಲ್ಲಿ ಅನಾವರಣಗೊಳಿಸಲಾಗುತ್ತಿದೆ. ದುಬೈನಲ್ಲಿರುವ ಅನಿವಾಸಿ ಭಾರತೀಯರು ಮೊದಲ ಬಾರಿಗೆ ಅರಬ್ ರಾಷ್ಟ್ರದಲ್ಲಿ ಗಾಂಧಿ ಪ್ರತಿಮೆಯನ್ನ ಅನಾವರಣ ಮಾಡಲು ಮುಂದಾಗಿದ್ದು, ಅರಬ್ ಧಿಕಾರಿಗಳು ಅನುಮತಿ ನೀಡಿದ್ದಾರೆ.