ಕೊನೆಗೂ ಚಾಲೆಂಜಿಂಗ್ ಸ್ಟಾರ್'ಗೆ ಸಿಕ್ಕ ಪತ್ನಿ ?
ಕೊನೆಗೂ ‘ಮುನಿರತ್ನ ಕುರುಕ್ಷೇತ್ರ’ದ ದುರ್ಯೋಧನನಿಗೆ ನಾಯಕಿ ಸಿಕ್ಕಿದ್ದಾರೆ. ಹೌದು, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರೊಂದಿಗೆ ಹೆಜ್ಜೆ ಹಾಕುವುದಕ್ಕೆ ಕೇರಳ ಕುಟ್ಟಿ ರಮ್ಯಾ ನಂಬೀಸನ್ ಬರಲಿದ್ದಾರೆ. ತೆಲುಗಿನ ರೆಜಿನಾ ಕ್ಯಾಸಂಡ್ರಾ, ಭಾನುಮತಿ ಪಾತ್ರದಲ್ಲಿ ನಟಿಸುತ್ತಾರೆಂದು ಹೇಳಲಾಗಿತ್ತು. ಸ್ವತಃ ರೆಜಿನಾ ಕೂಡ ಹಾಗೆ ಹೇಳಿಕೊಂಡಿದ್ದರು. ಆದರೆ, ಈಗ ದುರ್ಯೋಧನನ ಪತ್ನಿ ಭಾನುಮತಿಯಾಗಿ ರಮ್ಯಾ ನಂಬೀಸನ್ ಬರುತ್ತಿದ್ದಾರೆ. ಈ ನಡುವೆ ಕುಂತಿ ಪಾತ್ರಕ್ಕಾಗಿಯೇ ಆಯ್ಕೆ ಆಗಿದ್ದ ಲಕ್ಷ್ಮೀ ಅವರ ಬದಲಿಗೆ ಭಾರತಿ ವಿಷ್ಣುವರ್ಧನ್ ಕಾಣಿಸಿಕೊಳ್ಳುತ್ತಿದ್ದಾರೆ. ಜತೆಗೆ ಸುಭದ್ರ ಪಾತ್ರದಲ್ಲಿ ಪವಿತ್ರಾ ಲೋಕೇಶ್ ನಟಿಸುತ್ತಿದ್ದಾರೆ. ಲಕ್ಷ್ಮೀ ಅವರು ಡ್ರಾಮಾ ಜ್ಯೂನಿಯರ್ಸ್ ಚಿತ್ರೀಕರಣದಲ್ಲಿರುವ ಕಾರಣಕ್ಕೆ ಕುಂತಿ ಪಾತ್ರಕ್ಕೆ ಭಾರತಿ ವಿಷ್ಣುವರ್ಧನ್ ಅವರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.
