ಅರ್ಜುನ್ ಸರ್ಜಾ ಬ್ಯಾನರ್ನಲ್ಲಿ ದೃವ ಸರ್ಜಾ 6 ನೇ ಸಿನಿಮಾ ಮಾಡಲಿದ್ದಾರೆ. ಇದೀಗ ಏಳನೇ ಸಿನಿಮಾನೂ ಫಿಕ್ಸ್ ಆಗಿದೆ. ಅದೂ ಚಿರಂಜೀವಿ ಸರ್ಜಾ- ದೃವ ಸರ್ಜಾ ಹೋಂ ಬ್ಯಾನರ್ ಚಿತ್ರ.
ಭರ್ಜರಿ ಸಿನಿಮಾದ ಬಿಗ್ ಹಿಟ್ ನಂತರ ದೃವ ಸರ್ಜಾ ಯಾವ ಸಿನಿಮಾ ಮಾಡ್ತಾರೆ ಅನ್ನೋದರ ಕಡೆಯೇ ಎಲ್ಲರ ದೃಷ್ಟಿ. ಅದ್ದೂರಿ ಬಹದ್ದೂರ್ ಭರ್ಜರಿ ಮೂರು ಹಿಟ್ ಸಿನಿಮಾ ಕೊಟ್ಟ ರೈಸಿಂಗ್ ಸ್ಟಾರ್ ಬಗ್ಗೇನೆ ಈಗ ಗಾಂಧಿನಗರದಲ್ಲಿ ಮತ್ತೊಂದು ಸುದ್ದಿ ಹರಿದಾಡುತ್ತಿದೆ
ದೃವ ಸರ್ಜಾ ಸಂಪೂರ್ಣ ದೃಷ್ಟಿ ಈಗ ತನ್ನ ನಾಲ್ಕನೇ ಸಿನಿಮಾ ಪೊಗರು ಕಡೆಗಿದೆ. ಇದಾದ ನಂತರ ಮತ್ತೊಂದು ಸಿನಿಮಾಗೆ ಕಮಿಟ್ ಆಗಿದ್ದಾರೆ. ಇತ್ತೀಚೆಗಷ್ಟೆ ಮಾವನ ಸಿನಿಮಾಗೆ ಅಳಿಯಾ ಹೀರೋ ಅನ್ನೋ ಸುದ್ದಿಯನ್ನು ಓದಿದ್ದಿರಿ. ಅರ್ಜುನ್ ಸರ್ಜಾ ಬ್ಯಾನರ್ನಲ್ಲಿ ದೃವ ಸರ್ಜಾ 6 ನೇ ಸಿನಿಮಾ ಮಾಡಲಿದ್ದಾರೆ. ಇದೀಗ ಏಳನೇ ಸಿನಿಮಾನೂ ಫಿಕ್ಸ್ ಆಗಿದೆ. ಅದೂ ಚಿರಂಜೀವಿ ಸರ್ಜಾ- ದೃವ ಸರ್ಜಾ ಹೋಂ ಬ್ಯಾನರ್ ಚಿತ್ರ.
ಅತ್ತಿಗೆ ಚಿತ್ರದಲ್ಲಿ ಅಭಿನಯ
ಅತ್ತಿಗೆ ಮೇಘನಾ ರಾಜ್ ನಿರ್ಮಾಣದಲ್ಲಿ ದೃವ ಸರ್ಜಾ ಅಭಿನಯಿಸಲಿದ್ದಾರೆ. ಈ ಅಚ್ಚರಿಯ ಸುದ್ದಿಯನ್ನ ನಟಿ ಮೆಘನಾ ರಾಜ್ ಇತ್ತೀಚೆಗಷ್ಟೆ ಸರ್ಪ್ರೈಸ್ ಎಂದು ಹಂಚಿಕೊಂಡಿದ್ದಾರೆ. ಅದೇನೆ ಇದ್ರೂ ಈ ಸಿನಿಮಾ ಆಗಲು ಇನ್ನು ಮೂರು ವರ್ಷವಂತೂ ಆಗಿಯೇ ಆಗುತ್ತೆ. ಸದ್ಯ ಪೊಗರು ಸ್ಕ್ರಿಪ್ಟ್ ರೆಡಿಯಾಗುವ ಕಡೆಗೆ ದೃವ ದೃಷ್ಟಿ ನೆಟ್ಟಿದೆ.
