ದರ್ಶನ್ ಅವರು ಚೌಕ'ದಲ್ಲಿ ಸಣ್ಣ ಪಾತ್ರ ಮಾಡಿದ್ದರು
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಗ್ಗೆ ಗಾಂಧಿನಗರದಲ್ಲಿ ಒಂದು ಸುದ್ದಿ ಹರಿದಾಡುತ್ತಿದೆ. ಅದೇನಪ್ಪ ಅಂತೀರಾ ದರ್ಶನ್ ಅವರ ಅತ್ಯಂತ ನಿರೀಕ್ಷಿತ 50ನೇ ಚಿತ್ರ 'ಸರ್ವಾಂತರ್ಯಾಮಿ'ಯನ್ನು ತಮ್ಮ ಸೋದರ ದಿನಕರ್ ನಿರ್ದೇಶಿಸುತ್ತಿಲ್ಲ. ಬದಲಿಗೆ ಈ ಚಿತ್ರವನ್ನು 'ಚೌಕ' ಚಿತ್ರದ ನಿರ್ದೇಶಕ ತರುಣ್ ಸುಧೀರ್ ನಿರ್ದೇಶಿಸುತ್ತಿದ್ದಾರಂತೆ. 'ಸರ್ವಾಂತರ್ಯಾಮಿ'ಯನ್ನು ದಿನಕರ್ ನಿರ್ದೇಶಿಸಬೇಕಿತ್ತು. ಆದರೆ ಚಿತ್ರದ ಸ್ಕ್ರಿಪ್ಟ್ ವರ್ಕ್ ಮುಂದಕ್ಕೆ ಹೋದ ಕಾರಣ ತರುಣ್ ಸುಧೀರ್ 50ನೇ ಸಿನಿಮಾವನ್ನು ನಿರ್ದೇಶಿಸಲಿದ್ದಾರೆ. ದರ್ಶನ್ ಅವರು ಚೌಕ'ದಲ್ಲಿ ಸಣ್ಣ ಪಾತ್ರ ಮಾಡಿದ್ದು, ತರುಣ್ ಅವರ ನಿರ್ದೇಶನವನ್ನು ಮೆಚ್ಚಿಕೊಂಡಿದ್ದಾರೆ. ಈ ಕಾರಣದಿಂದ ತಮ್ಮ ಅರ್ಧ ಶತಕದ ಸಿನಿಮಾವನ್ನು ಅವರಿಗೆ ನೀಡಲಿದ್ದಾರಂತೆ. ಸದ್ಯ ಈ ಸುದ್ದಿ ಅಂತೆಕಂತೆಯಾಗಿದ್ದು, ಚಿತ್ರೀಕರಣ ಸೆಟ್ಟೇರಿದಾಗ ಮಾತ್ರ ನಿಜ ತಿಳಿಯಲಿದೆ.
