ಬಾಲಿವುಡ್ ನಲ್ಲಿ ಮತ್ತೊಮ್ಮೆ ಪೋರ್ಸ್, ಹೀರೋ ಅವರೇ..?
ಮುಂಬೈ(ಸೆ.29): 2011ರಲ್ಲಿ ತೆರೆಗೆ ಬಂದಿದ್ದ ಪೋರ್ಸ್ ಚಿತ್ರದ ಯಶಸ್ಸಿನ ನಂತರ ಇದರ ಮುಂದಿನ ಭಾಗ ತೆರೆಗೆ ಬರಲು ಸದ್ದಿಲ್ಲದೇ ಸಿದ್ಧತೆ ನಡೆಸಿದೆ.
ಹ್ಯಾಂಡ್ಸಮ್ ಹಂಕ್ ಜಾನ್ ಅಬ್ರಹಾಂ ಪೋರ್ಸ್ ನಲ್ಲಿ ಅದ್ಧೂರಿ ಬಾಡಿ ಬಿಲ್ಡ್ ಮಾಡಿ ಗಮನ ಸೆಳೆದಿದ್ದರು, ಈಗ ಪೋರ್ಸ್-2 ನಲ್ಲೂ ಮತ್ತೊಮ್ಮೆ ತಮ್ಮ ದೇಹ ಸಿರಿಯನ್ನು ಪ್ರದರ್ಶನಕ್ಕೆ ಇಟ್ಟಿದ್ದಾರೆ.
ನವೆಂಬರ್-18 ಕ್ಕೆ ಪೋರ್ಸ್-2 ರಿಲೀಸ್ ಕೂಡ ಆಗುತ್ತಿದೆ. ಪೋಲಿಸ್ ಅಧಿಕಾರಿ ಪಾತ್ರದಲ್ಲಿ ಜಾನ್ ಕಾಣಿಸಿಕೊಳ್ತಿದ್ದಾರೆ. ತಮ್ಮ ಟ್ವಿಟರ್ ಅಕೌಂಟ್ ಮೂಲಕ ಚಿತ್ರದ ಮೊದಲ ಪೋಸ್ಟರ್ ರಿವೀಲ್ ಮಾಡಿದ್ದಾರೆ.
ಈ ಚಿತ್ರದಲ್ಲಿಯೂ ಜಾನ್ ಎ.ಸಿ.ಪಿ ಪಾತ್ರವನ್ನೂ ಮಾಡ್ತಿರೋದಾಗಿ ಹೇಳಿಕೊಂಡಿದ್ದಾರೆ. ಜಾನ್'ಗೆ ಸಾಥಿಯಾಗಿ ಸೋನಾಕ್ಷಿ ಸಿನ್ಹಾ ಕಾಣಿಸಿಕೊಂಡಿದ್ದು, ಚಿತ್ರದ ಕಥೆ ಕುರಿತು ಯಾವುದೇ ಸುಳಿವು ಸಿಕ್ಕಿಲ್ಲ.