ಹಿಂದೂಗಳ ಭಾವನೆಗೆ ಧಕ್ಕೆ ತಂದ ಆರೋಪಕ್ಕಾಗಿ ನಟ ಸಲ್ಮಾನ್ ಖಾನ್ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಬಿಹಾರದ ನ್ಯಾಯಾಲಯ ಪೊಲೀಸರಿಗೆ ಸೂಚಿಸಿದೆ.
ಪಟನಾ: ಹಿಂದೂಗಳ ಭಾವನೆಗೆ ಧಕ್ಕೆ ತಂದ ಆರೋಪಕ್ಕಾಗಿ ನಟ ಸಲ್ಮಾನ್ ಖಾನ್ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಬಿಹಾರದ ನ್ಯಾಯಾಲಯ ಪೊಲೀಸರಿಗೆ ಸೂಚಿಸಿದೆ.
ಸಲ್ಮಾನ್ ಖಾನ್ ‘ಲವ್‌ರಾತ್ರಿ’ ಎಂಬ ಚಿತ್ರ ನಿರ್ಮಿಸುತ್ತಿದ್ದಾರೆ. ಇದರಲ್ಲಿ ನವರಾತ್ರಿ ಹಬ್ಬವನ್ನು ಲವ್‌ರಾತ್ರಿ ಎಂದು ಅಪಹಾಸ್ಯ ಮಾಡಲಾಗಿದೆ. ಹೀಗಾಗಿ ಸಲ್ಮಾನ್ ವಿರುದ್ಧ ಕೇಸು ದಾಖಲಿಸಬೇಕು ಎಂದು ವಕೀಲ ಸುಧೀರ್ ಓಝಾ ಅರ್ಜಿ ಸಲ್ಲಿಸಿದ್ದರು.
ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ಚಿತ್ರದ ನಿರ್ಮಾಪಕ ಸಲ್ಮಾನ್ ಖಾನ್, ಚಿತ್ರದ ನಾಯಕ ನಟ, ಸಲ್ಮಾನ್‌ರ ಅಳಿಯ ಆಯುಷ್ ಶರ್ಮಾ ವಿರುದ್ಧ ಎಫ್‌ಐಆರ್ ದಾಖಲಿಸಲು ಆದೇಶಿಸಿದೆ.
