ಹೀಗೆ ಕೇಳುವ ಬದಲು ಹುಡುಗಿ ವೇಷದಲ್ಲಿರುವ ಈ ಹುಡುಗ ಯಾರು ಅನ್ನುವುದು ಸೂಕ್ತ. ಯಾಕೆಂದರೆ ಇದು ಅವಳಲ್ಲ, ಅವನು! ಅಚ್ಚರಿಯಾದರೂ ಇದು.

ಹೀಗೆ ಕೇಳುವ ಬದಲು ಹುಡುಗಿ ವೇಷದಲ್ಲಿರುವ ಈ ಹುಡುಗ ಯಾರು ಅನ್ನುವುದು ಸೂಕ್ತ. ಯಾಕೆಂದರೆ ಇದು ಅವಳಲ್ಲ, ಅವನು! ಅಚ್ಚರಿಯಾದರೂ ಇದು.

ಈಗಾಗಲೇ ಪಾತ್ರಕ್ಕೆ ಹೆಣ್ಣು ವೇಷ ಹಾಕಿಕೊಂಡು ಹಲವು ಹೀರೋಗಳು ತೆರೆ ಮೇಲೆ ಮಿಂಚಿದ್ದಾರೆ. ಅವರ ಸಾಲಿಗೆ ಈಗ ರಿಯಲ್ ಸ್ಟಾರ್ ಉಪೇಂದ್ರ ಸೇರಿಕೊಳ್ಳುತ್ತಿದ್ದಾರೆ.

ಉಪೇಂದ್ರ ಅವರು ಹೆಣ್ಣಿನ ಗೆಟಪ್‌ನಲ್ಲಿ ಹೇಗೆ ಕಾಣಿಸಿಕೊಳ್ಳುತ್ತಾರೆ ಎಂಬುದಕ್ಕೆ ಇಲ್ಲಿರುವ ಫೋಟೋನೇ ಸಾಕ್ಷಿ.

ಹೌದು, ಮುಖ ಕಾಣದಂತೆ ಮುಸುಕು ಧರಿಸಿ ಹೆಣ್ಣಿನ ವೇಷದಲ್ಲಿ ಈ ಫೋಟೋದಲ್ಲಿರುವ ವ್ಯಕ್ತಿ ಉಪೇಂದ್ರ ಅವರೇ.‘ಹೋಮ್ ಮಿನಿಸ್ಟರ್’ ಚಿತ್ರದ ಒಂದು ಗೆಟಪ್. ಸಾಧು ಕೋಕಿಲ ಹಾಗೂ ಉಪೇಂದ್ರ ಅವರ ಮಧ್ಯೆ ನಡೆಯುವ ದೃಶ್ಯವೊಂದರಲ್ಲಿ ಹೀಗೆ ಹೆಣ್ಣಿನ ವೇಷದಲ್ಲಿ ಉಪೇಂದ್ರ ಎಂಟ್ರಿ ಕೊಡಲಿದ್ದಾರೆ.

ಈ ಚಿತ್ರವನ್ನು ಶ್ರೀಹರಿ ನಿರ್ದೇಶನ ಮಾಡುತ್ತಿದ್ದು, ಪೂರ್ಣಚಂದ್ರ ನಾಯ್ಡು ಚಿತ್ರವನ್ನು ನಿರ್ಮಿಸಿದ್ದಾರೆ.