ಬೆಂಗಳೂರು(ಸೆ.9): ಕಾವೇರಿ ನೀರು ಹಂಚಿಕೆಯಲ್ಲಿ ರಾಜ್ಯಕ್ಕಾಗಿರುವ ಅನ್ಯಾಯ ಖಂಡಿಸಿ ಇಂದು ನಡೆಯುತ್ತಿರುವ ಕರ್ನಾಟಕ ರಾಜ್ಯ ಬಂದ್'ಗೆ ಕನ್ನಡ ಚಿತ್ರರಂಗ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ.
ಶಿವಾನಂದ ಸರ್ಕಲ್ ಬಳಿಯ ಕರ್ನಾಟಕ ವಾಣಿಜ್ಯ ಮಂಡಳಿ ಮುಂಭಾಗ ಭಾರತಿ ವಿಷ್ಣುವರ್ಧನ್, ಲೀಲಾವತಿ, ಶೃತಿ, ಶಿವರಾಜ್ ಕುಮಾರ್, ಉಪೇಂದ್ರ, ದೇವರಾಜ್,ಶರಣ್,ಹಂಸಲೇಖ, ಸಾ.ರಾ. ಗೋವಿಂದು, ಶಶಿಕುಮಾರ್, ಥ್ರಿಲ್ಲರ್ ಮಂಜು, ಬಿ.ಸಿ.ಪಾಟೀಲ್, ಅನಿವೃದ್ಧ್, ಪ್ರಜ್ವಲ್ ದೇವರಾಜ್, ಅಜಯ್ ರಾವ್ ಸೇರಿದಂತೆ ಹಲವರು ಟೌನ್'ಹಾಲ್'ನಲ್ಲಿ ಕಪ್ಪುಪಟ್ಟಿ ಧರಿಸಿ ಸಾಂಕೇತಿಕ ಧರಣಿ ನಡೆಸುತ್ತಿದ್ದಾರೆ.
ಎಲ್ಲ ನಟರು ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ ಕರ್ನಾಟಕಕ್ಕೆ ನ್ಯಾಯ ಸಿಗುವವರೆಗೂ ಹೋರಾಟಕ್ಕೆ ಕೈಜೋಡಿಸುವುದಾಗಿ ತಿಳಿಸಿದ್ದಾರೆ.
