ಮುಂಬೈ (ಸೆ. 26): ಭ್ರಷ್ಟಾಚಾರದ ವಿರುದ್ಧ ಸಮರ ಸಾರಿ ಲೋಕಪಾಲ್ ಬಿಲ್ ಗಾಗಿ ಉಪವಾಸ ಸತ್ಯಾಗ್ರಹ ನಡೆಸಿದ್ದ, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಅಣ್ಣಾ ಹಜಾರೆ ಅವರ ಕುರಿತು ಸಿನಿಮಾವೊಂದು ರೆಡಿಯಾಗ್ತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅಣ್ಣಾ ಹಜಾರೆ ಜೀವನ ಚರಿತ್ರೆ ಸಿನಿಮಾ ಇದಾಗಿದ್ದು, ಅಣ್ಣಾ: ಕಿಸನ್ ಬಾಬುರಾವ್ ಹಜಾರೆ ಚಿತ್ರದ ಪೂರ್ಣ ಹೆಸರು.

ಅಣ್ಣಾ ಹಜಾರೆ ಓಡಾಡಿದ ಜಾಗದಲ್ಲಿ ಚಿತ್ರೀಕರಣ ಆಗಿದೆ. ಅಣ್ಣಾ ಹಜಾರೆ ಪಾತ್ರವನ್ನ ಚಿತ್ರದ ನಿರ್ದೇಶಕ ಶಶಾಂಕ್ ಉದಪುರಕರ್ ನಿರ್ವಹಿಸಿದ್ದಾರೆ.

ತನಿಷಾ ಮುಖರ್ಜಿ, ರಜಿತ್ ಕಪೂರ್ ಸೇರಿದಂತೆ ಅನೇಕರು ನಟಿಸಿದ್ದಾರೆ. ಚಿತ್ರ ಅಕ್ಟೋಬರ್-14 ಕ್ಕೆ ರಿಲೀಸ್ ಆಗುತ್ತಿದೆ. ಇಂಗ್ಲಿೀಷ್ ಮತ್ತು ಪ್ರಾದೇಶಿಕ ಭಾಷೆಯಲ್ಲಿ ಚಿತ್ರ ಡಬ್ ಆಗುತ್ತಿದೆ.