ಮಂಡ್ಯ(ಜೂ.10): ಶ್ರೀರಂಗಪಟ್ಟಣ ಪಟ್ಟಣದಲ್ಲಿ ಹುಚ್ಚ ವೆಂಕಟ್‌ ರಂಪಾಟ ಮುಂದುವರಿದಿದ್ದು, ಮಂಗಳವಾರ ಕಬ್ಬಿನ ಜ್ಯೂಸ್‌ ನೀಡಿದ ಸಾರ್ವಜನಿಕರ ಮೇಲೆ ಹಲ್ಲೆ ನಡೆಸಿ ತಾನು ಸಹ ಗೂಸ ತಿಂದಿದ್ದಾನೆ.

ಪಟ್ಟಣಕ್ಕೆ ಭಾನುವಾರ ರಾತ್ರಿ ಆಗಮಿಸಿದ್ದ ಹುಚ್ಚ ವೆಂಕಟ್‌ ಸೋಮವಾರ ಪಟ್ಟಣದ ವಿವಿಧೆಡೆ ಹುಚ್ಚಾಟ ಮೆರೆದ್ದಾನೆ. ಕೆಲವರು ಮಾನವೀಯ ದೃಷ್ಠಿಯಿಂದ ಆತನಿಗೆ ಬೆಳಗಿನ ಉಪಹಾರ, ಊಟ, ನೀರಿನ ಬಾಟಲ್ ವ್ಯವಸ್ಥೆ ಮಾಡಿ ಸಂತೈಸಿದರೆ ಅವರ ಮೇಲೆ ಮನಬಂದಂತೆ ನಿಂದಿಸಲು ಮುಂದಾಗಿದ್ದಾನೆ.

ಬಸ್‌ಗಳಿಲ್ಲದೇ ಶಾಲೆಗಳಿಗೆ ತೆರಳಲು ಶಿಕ್ಷಕರ ಪರದಾಟ..!

ಘಟನೆಯಿಂದ ಕೆಲ ಸಾರ್ವಜನಿಕರು ಹುಚ್ಚ ವೆಂಕಟನ ವರ್ತನೆ ಕಂಡು ಆತನ ಕಾರಿಗೆ ಪೆಟ್ರೋಲ್ ಹಾಕಿಸಿ ಬೆಂಗಳೂರಿಗೆ ಹಿಂತಿರುಗುವಂತೆ ಸ್ವಲ್ಪ ಹಣ ನೀಡಿ ಇಲ್ಲಿಂದ ಕಳುಹಿಸಿದ್ದಾರೆ. ಆದರೆ, ಮಂಗಳವಾರ ಶ್ರೀರಂಗಪಟ್ಟಣದಿಂದ ಪಾಂಡವಪುರ ಮಾರ್ಗಕ್ಕೆ ಹೊರಟ ಹುಚ್ಚ ವೆಂಕಟ್‌ ದಾರಿ ಮಧ್ಯ ತಾಲೂಕಿನ ದರಸಗುಪ್ಪೆ ಬಳಿಯ ಕಬ್ಬಿನ ಜ್ಯೂಸ್‌ ಅಂಗಡಿ ಬಳಿ ತೆರಳಿ ಜ್ಯೂಸ್‌ ಕುಡಿದಿದ್ದಾನೆ. ಜ್ಯೂಸ… ಕೊಟ್ಟಮಾಲೀಕ ಹಣ ಕೇಳದಿದ್ದರೂ ಸಹ ಆತನೊಂದಿಗೆ ವ್ಯತಿರಿಕ್ತವಾಗಿ ವರ್ತಿಸಿ ಹಲ್ಲೆ ಮಾಡಿದ್ದಾನೆ. ಈತನ ವರ್ತನೆಯಿಂದ ಆಕ್ರೋಶಗೊಂಡ ಸ್ಥಳದಲ್ಲಿದ್ದ ಕೆಲ ಸಾರ್ವಜನಿಕರು ವೆಂಕಟ್‌ನನ್ನು ಹಿಡಿದು ಥಳಿಸಿದ್ದಾರೆ.

ನಾಗಮಂಗಲದಲ್ಲಿಯೂ ಹುಚ್ಚ ವೆಂಕಟ್‌ ರಂಪಾಟ

ನಾಗಮಂಗಲ ಪಟ್ಟಣದ ಹೊರವಲಯ ಚಾಮರಾಜನಗರ -ಜೇವರ್ಗಿ ರಾಷ್ಟ್ರೀಯ ಹೆದ್ದಾರಿ ಬದಿಯ ಎಪಿಎಂಸಿ ಮಾರುಕಟ್ಟೆಬಳಿಯಿರುವ ಪೆಟ್ರೋಲ್ ಬಂಕ್‌ನಲ್ಲಿ ಕಾರಿಗೆ ಪೆಟ್ರೋಲ್ ಹಾಕಿಸಿಕೊಂಡು ಹಣ ನೀಡದೆ ನಟ ಹುಚ್ಚ ವೆಂಕಟ್‌ ರಂಪಾಟ ನಡೆಸಿರುವ ಘಟನೆ ಮಂಗಳವಾರ ನಡೆದಿದೆ.

ಎಪಿಎಂಸಿ ಮಾರುಕಟ್ಟೆಬಳಿಯಿರುವ ಮಹದೇಶ್ವರ ಪೆಟ್ರೋಲ್ ಬಂಕ್‌ನಲ್ಲಿ ಕಾರಿಗೆ ಪೆಟ್ರೋಲ್ ಹಾಕಿಸಿಕೊಂಡು ನಂತರ ಹಣ ನೀಡದೆ ಬಂಕ್ ಸಿಬ್ಬಂದಿ ಜೊತೆ ಅನುಚಿತವಾಗಿ ವರ್ತಿಸುವುದಲ್ಲದೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ನಂತರ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪಟ್ಟಣ ಠಾಣೆಯ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಲು ಮುಂದಾದರು. ಈ ವೇಳೆ ಪೊಲೀಸರನ್ನೂ ಸಹ ಏಕವಚನದಲ್ಲಿ ನಿಂದಿಸಿದ ಪ್ರಸಂಗ ನಡೆಯಿತು.

ಮಾಸ್ಕ್ ಖರೀದಿಸುವಂತೆ ಒತ್ತಡ: ಖಾಸಗಿ ಶಾಲೆಗಳಿಗೆ ಬಿಸಿ ಮುಟ್ಟಿಸಿದ ಶಿಕ್ಷಣ ಇಲಾಖೆ

ಹುಚ್ಚ ವೆಂಕಚ್‌ ವರ್ತನೆಯಿಂದ ಬೇಸತ್ತ ಸ್ಥಳೀಯರು ಮತ್ತು ಪೊಲೀಸರು ತಾಲೂಕು ಗಡಿಬಿಟ್ಟು ಕಳುಹಿಸಿದರೆ ಸಾಕು ಎನ್ನುವ ಸ್ಥಿತಿಗೆ ಬಂದರು. ಬಳಿಕ ಸ್ಥಳೀಯರೊಬ್ಬರು ಹುಚ್ಚವೆಂಕಟ್‌ಗೆ ಊಟ ತಂದುಕೊಡುವ ಜೊತೆಗೆ ಬಂಕ್‌ಗೆ ಹಣ ಪಾವತಿಸಿದ ನಂತರ ತಾಲೂಕಿನ ಗಡಿವರೆಗೂ ಬಿಟ್ಟುಕೊಟ್ಟು ಬೆಂಗಳೂರು ಮಾರ್ಗವಾಗಿ ಕಳುಹಿಸಿಕೊಟ್ಟರು. ಹುಚ್ಚವೆಂಕಚ್‌ ರಂಪಾಟ ತಿಳಿಯುತ್ತಿದ್ದಂತೆ ಸ್ಥಳೀಯ ಸಾರ್ವಜನಿಕರು ಪೆಟ್ರೋಲ್ ಬಂಕ್ ಬಳಿ ಜಮಾಯಿಸಿದ್ದರು.