ಈ ಮಲೆಮಹದೇಶ್ವರ ಬೆಟ್ಟದ ಸಮೀಪದ ಎರಡು ಸರ್ಕಾರಿ ಶಾಲೆಗಳಿಗೆ 7 ಲಕ್ಷ ರೂ ಮೌಲ್ಯದ ಸಲಕರಣೆ ನೆರವು ನೀಡುವ ಸಲುವಾಗಿ 3 ದಿನಗಳ ಬೈಕ್ ಪ್ರವಾಸ ಹಮ್ಮಿಕೊಂಡಿದೆ. ಅವರ ಈ ಸಾಮಾಜಿಕ ಕಾಳಜಿಗೆ ನಿರ್ದೇಶಕ ಬಿಎಸ್ ಲಿಂಗದೇವರು ಚಿತ್ರತಂಡ ಸಾಥ್ ನೀಡಿದೆ. ಈ ಪ್ರವಾಸಕ್ಕೆ ಅವರ ಚಿತ್ರದ ನಾಯಕ ನಟ ರಿಷಿ ಮತ್ತು ನಾಯಕಿ ರಾಶಿ ಚಾಲನೆ ನೀಡಿದ್ದಾರೆ.

40 ಜನರ ತಂಡ ಪ್ರವಾಸ ಹೋಗುತ್ತಿದೆ. ಈ ತಂಡದ ಯಾತ್ರೆಗೆ ಡಿ.7ರ ಮುಂಜಾನೆ ಬೆಂಗಳೂರಿನ ವಿಜಯನಗರದಲ್ಲಿ ಲಿಂಗದೇವರು, ರಿಷಿ, ರಾಶಿ ಹಾಜರಿದ್ದು ಶುಭ ಕೋರಿದರು. ಈ ತಂಡದ ಹೊಸ ಸಿನಿಮಾದ ನಿರ್ಮಾಪಕರು ಕೂಡ ಈ ಒಳ್ಳೆಯ ಕೆಲಸದಲ್ಲಿ ಜೊತೆಯಾಗಿದ್ದಾರೆ. 

ಇಂಟರೆಸ್ಟಿಂಗ್ ಅಂದ್ರೆ ಲಿಂಗದೇವರು ಅವರ ಹೊಸ ಸಿನಿಮಾ ಕೂಡ ಹುಡುಕಾಟದ ಕುರಿತ ಚಿತ್ರ ಎನ್ನಲಾಗಿದೆ. ಈ ಕುರಿತು ಲಿಂಗದೇವರು, ‘ಇತ್ತೀಚೆಗೆ ನಾನೊಬ್ಬ ಪ್ರವಾಸಿಗ ಆಗದೆ, ಪ್ರಯಾಣಿಕ ಆಗಬೇಕು ಅಂತೆನಿಸುತ್ತಿದೆ. ಆ ಹಿನ್ನೆಲೆಯಲ್ಲೇ ನನ್ನ ಮುಂದಿನ ಸಿನಿಮಾ ಕೂಡ. ಹಾಗಾಗಿ ಇವತ್ತು ನನ್ನ ಸ್ನೇಹಿತರೆಲ್ಲಾ ಸೇರಿ ಪ್ರಯಾಣದ ಜತೆಗೆ ಸಮಾಜಕ್ಕೆ ಏನಾದರೂ ಒಳ್ಳೆಯದನ್ನು ಮಾಡಬೇಕು ಎನ್ನುವ ದೃಷ್ಟಿಯಿಂದ ಈ ಪಯಣ ಶುರು ಮಾಡಿದ್ದಾರೆ’ ಎನ್ನುತ್ತಾರೆ. ಎಲ್‌ಜಿ ಬಳಗದ ಸದಸ್ಯ ಸೋಮಶೇಖರ್, ‘58 ಜನ ಎಲ್‌ಜಿ ಬಳಗದಲ್ಲಿದ್ದೇವೆ. ಈ ಸಲ ಮಲೆ ಮಹದೇಶ್ವರ ಪ್ರದೇಶದ ಹಿಂದುಳಿದ ಭಾಗದ ಎರಡು ಶಾಲೆಗಳಿಗೆ ಸ್ಮಾರ್ಟ್ ಕ್ಲಾಸ್ ಮತ್ತು ಸೋಲಾರ ಸೌಲಭ್ಯಗಳನ್ನು ನೀಡಲು ಹೊರಟಿದ್ದೇವೆ. ಲಿಂಗದೇವರು ತಂಡ ಸಾಥ್ ನೀಡಿದ್ದು ಖುಷಿ ತಂದಿದೆ’ ಎಂದರು.