Asianet Suvarna News Asianet Suvarna News

ಕಾರು, ಶರ್ಟ್ ತುಂಬಾ ಅಮಿತಾಭ್ ಡೈಲಾಗ್ಸ್, ಸಿನಿ ಹೆಸರು : ಫ್ಯಾನ್‌ಗೆ ಬಚ್ಚನ್ ಫಿದಾ!

-ತನ್ನ ಕಾರಿನ ತುಂಬಾ ಅಮಿತಾಬ್‌ ಡೈಲಾಗ್ಸ್‌ ಬರೆದಿರುವ ಅಭಿಮಾನಿ
-ಬಿಗ ಬಿ ಆಟೋಗ್ರಾಫ್‌ ಹಾಕುವವರೆಗೆ ಕಾರು ಚಲಾಯಿಸಲ್ಲ ಎಂದ ಫ್ಯಾನ್‌
-ಅಭಿಮಾನಿ ಅಂಗಿಯ ಮೇಲೆಲ್ಲ ಅಮಿತಾಬ್‌ ಸಿನಿಮಾ ಹೆಸರುಗಳು

fan painted his car and shirt with Amitabh Bachchans iconic dialogues!
Author
Bengaluru, First Published Oct 22, 2021, 6:42 PM IST
  • Facebook
  • Twitter
  • Whatsapp

ಮುಂಬೈ (ಅ. 22 ) : ಮೆಗಾಸ್ಟಾರ್, ಬಾಲಿವುಡ್‌ನ ಬಿಗ್‌ ಬಿ ಅಮಿತಾಭ್‌ ಬಚ್ಚನ್‌ರಿಗೆ ( Amitabh Bachchan) ಕೋಟ್ಯಂತರ  ಅಭಿಮಾನಿಗಳಿದ್ದಾರೆ. ಅಮಿತಾಭ್‌ರನ್ನು ಭೇಟಿ ಮಾಡಿ ಅವರು ಇಷ್ಟಪಡುವ ಕೆಲಸ ಏನಾದರೂ ಮಾಡಬೇಕು ಎಂದು ಸಾವಿರಾರು ಅಭಿಮಾನಿಗಳು ಕಾಯುತ್ತಿರುತ್ತಾರೆ. ಇಂಥಹ ಅಭಿಮಾನಿಯೊಬ್ಬರ ಬಗ್ಗೆ ಬಿಗ್‌ ಬಿ ಈಗ ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ವೊಂದನ್ನು ಹಾಕಿದ್ದಾರೆ. ಇಡೀ ಕಾರಿನ ಮೇಲೆ ಮತ್ತು ಅಂಗಿಯ ಮೇಲೆಲ್ಲಾ ಅಮಿತಾಭ್ ಬಚ್ಚನ್‌ರ ಡೈಲಾಗ್‌ ಬರೆಸಿಕೊಂಡಿರುವ ಅಭಿಮಾನಿಯ ಪೋಸ್ಟ್ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

 

 

ಅಮಿತಾಭ್‌ ಬಚ್ಚನ್‌ರ ಪ್ರಸಿದ್ದ ಸಿನಿಮಾಗಳ ಡೈಲಾಗ್‌ಗಳನ್ನು ತಮ್ಮ ಕಾರು ಮತ್ತು ಅಂಗಿಯ ಮೇಲೆ ಬರೆಸಿಕೊಂಡಿರುವ ತಮ್ಮ ಡೈ ಹಾರ್ಡ್‌ (Die Hard)  ಅಭಿಮಾನಿಯ ಬಗ್ಗೆ ಬಿಗ್‌ ಬಿ ಪೋಸ್ಟ್‌ ಮಾಡಿದ್ದು ತಮ್ಮ ಫಾಲೋವರ್ಸ್‌ಗಳಿಗೆ ಪರಿಚಯ ಮಾಡಿಸಿದ್ದಾರೆ. ಇನ್ಸ್ಟಾಗ್ರಾಮನಲ್ಲಿ ಕೊಲ್ಯಾಜ್‌ (Collage) ಪೋಟೋಗಳನ್ನು ಹಂಚಿಕೊಂಡಿರುವ ಬಿಗ್‌ ಬಿ ಭಾವನಾತ್ಮಕ ಕ್ಯಾಪ್ಶನ್‌ವೊಂದನ್ನು (Caption) ಬರೆದಿದ್ದಾರೆ.  ' ಇವರು ನನ್ನ ಸಿನಿಮಾದ ಸುಪ್ರಸಿದ್ಧ ಡೈಲಾಗ್‌ಗಳನ್ನು ತಮ್ಮ ಕಾರ್‌ ಮೇಲೆ ಬರೆಸಿದ್ದಾರೆ ಮತ್ತು ಇವರ ಅಂಗಿಯ ಮೇಲೆ ನನ್ನ ಸಿನಿಮಾಗಳ ಹೆಸರು ಇವೆ, ಕಾರಿನ ಬಾಗಿಲನ್ನು ತೆರೆದಾಗ ನನ್ನ ಸಿನಿಮಾದ ಡೈಲಾಗ್‌ಗಳು ಪ್ಲೇ ಆಗುತ್ತವೆ, ಇದು ಅತ್ಯದ್ಭುತವಾಗಿದೆ ಎಂದು ಅಮಿತಾಭ್‌ ಹೇಳಿದ್ದಾರೆ. 

ಕಾರಿನ ಡ್ಯಾಶ್‌ ಬೋರ್ಡ್‌ ಮೇಲೆ ಅಮಿತಾಭ್‌ ಬಚ್ಚನ್‌ ಆಟೋಗ್ರಾಫ್‌ ಹಾಕುವವರೆಗೂ ತಾನು ಕಾರನ್ನು ಚಲಾಯಿಸುವುದಿಲ್ಲ ಎಂದು ಅಭಿಮಾನಿ ಹೇಳಿದ್ದಾನೆ. ಈಗ ತನ್ನ ಡೈ ಹಾರ್ಡ್‌ ಅಭಿಮಾನಿಯನ್ನು ಭೇಟಿಯಾಗಿರುವ ಅಮಿತಾಬ್‌ ಡ್ಯಾಶ್‌ಬೋರ್ಡ್ ಮೇಲೆ ಆಟೋಗ್ರಾಫ್‌ ಹಾಕುವ ಮೂಲಕ ಅಭಿಮಾನಿಯ ಆಸೆಯನ್ನು ಈಡೇರಿಸಿದ್ದಾರೆ. ಅಮಿತಾಭ್‌ ಈ ಬಗ್ಗೆ ಪೋಸ್ಟ್‌ ಮಾಡುತ್ತಿದ್ದಂತೆಯೇ ಕಮೆಂಟ್‌ಗಳ ಸುರಿಮಳೆಯೇ ಬಂದಿದೆ. ಸದ್ಯಕ್ಕೆ  ಕೌನ್‌ ಬನೆಗಾ ಕರೋಡ್‌ಪತಿ ಕಾರ್ಯಕ್ರಮದ ನಿರೂಪಣೆಯಲ್ಲಿ ನಿರತರಾಗಿರುವ ಭಾರತೀಯ ಸಿನಿ ರಸಿಕರ ಆರಾಧ್ಯ ದೈವ  ಅಮಿತಾಬ್, ಮೇಡೆ(Mayday), ಝುಂಡ್‌(Jhund), ಗುಡ್‌ಬಾಯ್(Good Bye),ಬ್ರಹ್ಮಾಸ್ತ್ರ(Brahmastra) ಇಂಟರ್ನ್‌(Intern) ಚಿತ್ರ ಸೇರಿದಂತೆ  ಅನುಪಮ್‌ ಖೇರ್‌(Anupam Kher) ಮತ್ತು  ಪರಿಣಿತಿ ಚೋಪ್ರಾ(Parineeti Chopra) ಒಟ್ಟಿಗೆ ಕಾಣಿಸಿಕೊಳ್ಳಲಿರುವ ಉಂಚಾಯಿ ಚಿತ್ರದಲ್ಲೂ ಕಾಣಿಸಿಕೊಳ್ಳಲಿದ್ದಾರೆ.

ಈ ವಯಸ್ಸಿನಲ್ಲೂ ಫಿಟ್‌ ಆಗಿರುವ ಬಿಗ್‌ ಬಿ 

79 ವರ್ಷ ಪೂರೈಸಿರುವ ಬಾಲಿವುಡ್‌ನ (Bollywood)ಚಕ್ರವರ್ತಿ ಮತ್ತು ಸೂಪರ್‌ ಸ್ಟಾರ್‌ ಅಮಿತಾಬ್ ಬಚ್ಚನ್ (Amitabh Bachchan)  ದಿನದಲ್ಲಿ 16 ಗಂಟೆಗಳ ಕಾಲ ಕೆಲಸ ಮಾಡುತ್ತಾರೆ. ಆದರೆ ಕೆಲಸದ ಜೊತೆಗೆ ಅವರು ತಮ್ಮ ಆರೋಗ್ಯದ ಬಗ್ಗೆಯೂ ಸಂಪೂರ್ಣ ಕಾಳಜಿ ವಹಿಸುತ್ತಾರೆ. ವರದಿಗಳ ಪ್ರಕಾರ, ಸಿಹಿತಿಂಡಿಗಳಿಂದ ದೂರವಿರುವುದು ಅವರ ಫಿಟ್ನೆಸ್‌ನ ದೊಡ್ಡ ರಹಸ್ಯವಾಗಿದೆ. ಅವರು ಚಾಕೊಲೇಟ್ ಮತ್ತು ಪೇಸ್ಟ್ರಿ ತಿನ್ನುವುದನ್ನು ಅವಾಯ್ಡ್ ಮಾಡುತ್ತಾರೆ. ಅಮಿತಾಬ್ ಬಚ್ಚನ್ ಅನೇಕ ಚಿತ್ರಗಳಲ್ಲಿ ಸಿಗರೇಟು ಸೇದುವುದು ಮತ್ತು ಮದ್ಯಪಾನ ಮಾಡುವುದನ್ನು ಕಂಡರೂ, ನಿಜ ಜೀವನದಲ್ಲಿ ಅವರು ಈ ಎರಡನ್ನು ಮುಟ್ಟುವುದಿಲ್ಲ. ಅಂದಹಾಗೆ, ಸಿಗರೇಟ್-ಆಲ್ಕೋಹಾಲ್ ಹೊರತುಪಡಿಸಿ, ಬಿಗ್ ಬಿ ಟೀ-ಕಾಫಿ ಕುಡಿಯಲು ಇಷ್ಟಪಡುವುದಿಲ್ಲ

ಈ ವಯಸ್ಸಿನಲ್ಲೂ ಫಿಟ್‌ ಆಗಿರುವ ಬಿಗ್‌ ಬಿ ಫಿಟ್ನೆಸ್‌ ಸಿಕ್ರೇಟ್‌ ಏನು?

Follow Us:
Download App:
  • android
  • ios